ಬೆಂಗಳೂರು: ದಸರಾ ಹಬ್ಬದ ಶುಭಾಷಯಗಳನ್ನು ತಿಳಿಸಿರುವ ಸ್ಯಾಂಡಲ್ ವುಡ್ ನಟಿ, ಮಾಜಿ ಸಂಸದೆ ರಮ್ಯಾ, ಕಾಮಾಕ್ಷಿ ಪದದ ಅರ್ಥವನ್ನು ಹೇಳುವ ಮೂಲಕ ನಾವೆಲ್ಲರೂ ಕಾಮಾಕ್ಷಿಯರಾಗೋಣ ಎಂದು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ನಟಿ ರಮ್ಯಾ, ಕಾಮಾಕ್ಷಿ ಎಂಬುದು ಮೂರು ’ಕಾ’, ’ಮಾ’ ಹಾಗೂ ’ಕ್ಷ್’ ಪದಗಳಿಂದ ಕೂಡಿದ್ದು, ಕಾ ಎಂದರೆ ಸರಸ್ವತಿ, ಮಾ ಎಂದರೆ ಲಕ್ಷ್ಮಿ ಹಾಗೂ ಕ್ಷ್ ಎಂದರೆ ಕಣ್ಣು ಅರ್ಥಾತ್ ಜ್ಞಾನ, ಬುದ್ಧಿ ಹಾಗೂ ಜ್ಞಾನೋದಯ ಎಂಬುದಾಗಿದ್ದು, ಕಾಮಾಕ್ಷಿ ಶಾಂತ ಸ್ವರೂಪವನ್ನು ಪ್ರತಿನಿಧಿಸುತ್ತಾಳೆ ಎಂದು ತಿಳಿಸಿದ್ದಾರೆ.
ವರ್ಷಗಳಿಂದ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ನಟಿ ರಮ್ಯಾ, ಇತ್ತೀಚಿನ ದಿನಗಳಲ್ಲಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.