ಕೊರೊನಾದಿಂದ ಯಾವಾಗ ನಾವೆಲ್ಲಾ ಮುಕ್ತ ಆಗ್ತೀವೋ ಅಂತ ಜನ ಕಾಯ್ತಾ ಇದ್ದಾರೆ. ಡೆಡ್ಲಿ ವೈರಸ್ ಕಾಟಕ್ಕೆ ಬೇಸತ್ತಿರುವ ಜನ ಮನೆಯಿಂದ ಹೊರ ಬರಲು ಹೆದರುವಂತಾಗಿದೆ. ಈ ಮಹಾಮಾರಿಯಿಂದ ಯಾರೂ ಹೊರತಾಗಿಲ್ಲ. ಈ ಮಹಾಮಾರಿಯ ಅಂತ್ಯ ಯಾವಾಗೋ ಗೊತ್ತಿಲ್ಲ. ಇದೆಲ್ಲದರ ನಡುವೆ ಈ ಕೊರೊನಾ ಸೆಲೆಬ್ರಿಟಿಗಳನ್ನೂ ಬೆಂಬಿಡದೇ ಕಾಡುತ್ತಿದೆ.
ನಿನ್ನೆಯಷ್ಟೆ ನಟ ಕಿಚ್ಚ ಸುದೀಪ್ ಮನೆಯ ಪಕ್ಕದ ಮನೆಯವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಕೊರೊನಾ ಕಾಣಿಸಿಕೊಂಡ ಮನೆಯ ಅಕ್ಕ ಪಕ್ಕದ ಮನೆಗೂ ಸ್ಯಾನಿಟೈಸರ್ ಮಾಡಲಾಗಿತ್ತು. ಇದೀಗ ದರ್ಶನ್ ಹಾಗೂ ಅವರ ಪತ್ನಿ ವಾಸವಿರುವ ಅಪಾರ್ಟ್‌ಮೆಂಟ್‌ನಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಹೊಸಕೆರೆಹಳ್ಳಿಯ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿ ದರ್ಶನ್ ಹಾಗೂ ಅವರ ಪತ್ನಿ ವಾಸವಿದ್ದಾರೆ. ಈ ಅಪಾರ್ಟ್‌ಮೆಂಟ್‌ನಲ್ಲಿ ಇದೀಗ ಕೊರೊನಾ ಪಾಸಿಟಿವ್ ಕೇಸ್ ಧೃಡವಾಗಿದೆ. ಇನ್ನು ಇದೇ ಅಪಾರ್ಟ್‌ಮೆಂಟ್‌ನಲ್ಲಿ ಪೂಜಾಗಾಂಧಿ, ಹಾಗೂ ನಟ ರವಿಶಂಕರ್ ಕೂಡ ವಾಸವಾಗಿದ್ದಾರಂತೆ.