ಶೃತಿ ಹಾಸನ್ ತನ್ನ ನಟನಾ ಶೈಲಿಯಿಂದಲೇ ಫೇಮಸ್ ಆದ ನಟಿ. ವಿಭಿನ್ನ ನಟನೆಯ ಮೂಲಕ ಮನೆ ಮಾತಾದ ಬಹು ಬೇಡಿಕೆಯ ನಟಿ. ಬಹುಮುಖ ಪ್ರತಿಭೆಯುಳ್ಳ ಈ ನಟಿ ಇದೀಗ ಟಾಲಿವುಡ್ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಜೊತೆ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು, ಬಹು ದಿನಗಳ ಬಳಿಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಪವನ್ ಕಲ್ಯಾಣ್ ವಕೀಲ್ ಸಾಬ್ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶೃತಿ ಹಾಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇವರ ಸಂಭಾವನೆ ಇದೀಗ ಚರ್ಚೆಗೆ ಬಂದಿದೆ.
ಹೌದು, ಶೃತಿ ಹಾಸನ್ ಈ ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 70 ಲಕ್ಷ ಸಂಭಾವನೆ ಕೇಳಿದ್ದಾರಂತೆ. ಕೇವಲ 7 ದಿನಕ್ಕೆ ಅದು ಒಂದು ಗಂಟೆಗೆ ಒಂದು ಲಕ್ಷದಂತೆ ಲೆಕ್ಕಹಾಕಿ ಇಷ್ಟು ದೊಡ್ಡ ಮೊತ್ತದ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ನಿರ್ಮಾಪಕರು ಒಪ್ಪಿದರೆ ಈ ಸಿನಿಮಾದಲ್ಲಿ ನಾಯಕಿಯಾಗಿ ಶೃತಿ ಹಾಸನ್ ನಟಿಸಲಿದ್ದಾರೆ.