
ತೆಲುಗಿನ ‘ನಾಗ ಭೈರವಿ’ ಎಂಬ ಧಾರಾವಾಹಿಯಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಗಟ್ಟಿಮೇಳ’ ಧಾರಾವಾಹಿಯ ಆರತಿ ಪಾತ್ರದಾರಿ ಅಶ್ವಿನಿ ಕಾಣಿಸಿಕೊಳ್ಳುತ್ತಿದ್ದಾರೆ.
ನಟಿ ಅಶ್ವಿನಿ ಈ ಧಾರಾವಾಹಿಯಲ್ಲಿ ನಾಗದೇವತೆ ಹಾಗೂ ಬುಡಕಟ್ಟು ಜನಾಂಗದವಳಾಗಿ ಎರಡು ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಜಿ ತೆಲುಗು ಚಾನೆಲ್ ನಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದ್ದು, ರಮ್ಯಾ ಕೃಷ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಶ್ವಿನಿ ತೆಲುಗಿನಲ್ಲಿ ಮಿಂಚಲು ಸಜ್ಜಾಗಿದ್ದಾರೆ.