
ನಟಿ ಮಯೂರಿ ಇಂದು ತಾವು ತಾಯಿಯಾಗುತ್ತಿರುವ ಸಂತೋಷದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ನಟಿ ಮಯೂರಿ ಜೂನ್ 12ರಂದು ಬಾಲ್ಯ ಗೆಳೆಯರಾದ ಅರುಣ್ ಎಂಬುವವರೊಂದಿಗೆ ವೆಂಕಟೇಶ್ವರ ದೇವಸ್ಥಾನದಲ್ಲಿ ಕೆಲವೇ ಜನರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದರು.
ಇಂದು ಮಕ್ಕಳ ದಿನಾಚರಣೆಯ ದಿನದಂದು ಹಾಗೂ ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ಈ ಸಿಹಿ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನಾವು ನಮ್ಮ ಮಗುವನ್ನು ಸ್ವಾಗತಿಸಲು ಸಿದ್ದರಾಗಿದ್ದೇವೆ. ಶುಭದಿನದಂದು ಘೋಷಿಸಲು ನಾವು ಹೆಮ್ಮೆಪಡುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ ಪುನಿತ್ ಶರಮನ್ ನಿರ್ದೇಶನದ ‘ಆದ್ಯಂತ’ ಎಂಬ ಸಿನಿಮಾದಲ್ಲಿ ನಟಿ ಮಯೂರಿ ನಾಯಕಿಯಾಗಿ ನಟಿಸುತ್ತಿದ್ದಾರೆ.
