![](https://kannadadunia.com/wp-content/uploads/2020/12/kareena-1.jpg)
ಕರೀನಾ ಕಪೂರ್ ಬಾಲಿವುಡ್ ನ ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬರು. ಒಂದು ಮಗುವಿನ ತಾಯಿ ಎನಿಸಿಕೊಂಡರೂ ಅವರ ಸೌಂದರ್ಯ ಇನ್ನು ಕಡಿಮೆಯಾಗಿಲ್ಲ. ಇದೀಗ ಅವರು ಇನ್ ಸ್ಟಾಗ್ರಾಂನಲ್ಲಿ ತಮ್ಮ ಸೌಂದರ್ಯದ ರಹಸ್ಯವನ್ನು ರಿವಿಲ್ ಮಾಡಿದ್ದಾರೆ.
ಕರೀನಾ ಕಪೂರ್ ತಮ್ಮ ಕೂದಲಿಗೆ ಮತ್ತು ಚರ್ಮಕ್ಕೆ ಬಾದಾಮಿ ಎಣ್ಣೆ ಹಚ್ಚುತ್ತಾರಂತೆ. ಚರ್ಮವನ್ನು ಮೃದುಗೊಳಿಸಲು ಮುಖದ ಮೇಲೆ ಜೇನುತುಪ್ಪವನ್ನು ಬಳಸುತ್ತಾರೆ. ಹಾಗೇ ಚರ್ಮವನ್ನು ಹೈಡ್ರೀಕರಿಸಲು ಸಾಕಷ್ಟು ನೀರನ್ನು ಕುಡಿಯುತ್ತಾರಂತೆ.
ಅವರು ಉಬ್ತಾನ್ ದೇಸಿ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಇದಕ್ಕೆ ಮೊಸರು ಮತ್ತು ಬಾದಾಮಿ ಎಣ್ಣೆಯನ್ನು ಬೆರೆಸುವ ಮೂಲಕ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚುತ್ತಾರೆ. ಇದು ಸತ್ತ ಜೀವಕೋಶಗಳನ್ನು ಮತ್ತು ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಕರೀನಾ ದಿನಕ್ಕೆ 2 ಬಾರಿ ಮಾಯಿಶ್ವರೈಸರ್ ಕ್ರೀಂ ಹಚ್ಚುತ್ತಾರಂತೆ.