
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಟಾಲಿವುಡ್ ನ ಜನಪ್ರಿಯ ನಟಿ ಸಮಂತಾ ಅಕ್ಕಿನೇನಿ ತಮ್ಮ ಪ್ರತಿಯೊಂದು ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಇನ್ ಸ್ಟಾಗ್ರಾಂನಲ್ಲಿ 13 ಮಿಲಿಯನ್ ಫಾಲೋವರ್ಸ್ ತಲುಪಿದ ಸಂತಸವನ್ನು ಹಂಚಿಕೊಂಡಿದ್ದರು.
ತಮ್ಮ ಲೇಟೆಸ್ಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಬ್ಬದ ಮನಸ್ಥಿತಿಯಲ್ಲಿ ಎಂದು ಬರೆದುಕೊಂಡಿದ್ದು ಇದಕ್ಕೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳು ಬಂದಿವೆ.

