
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ನಟ ರಮೇಶ್ ಅರವಿಂದ್ ತಮ್ಮ ನಟನೆಯ ಮೊದಲನೇ ಸಿನಿಮಾ ‘ಸುಂದರ ಸ್ವಪ್ನಗಳು’ ಸಿನಿಮಾ ರಿಲೀಸ್ ಆದ ಸವಿನೆನಪನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನನ್ನ ಮೊದಲನೆಯ ಚಿತ್ರ “ಸುಂದರ ಸ್ವಪ್ನಗಳು” ರಿಲೀಸ್ ಆದ ದಿನ. collageನಿಂದ ಹೊರಟು. ಮೊದಲನೇ ದಿನದ ಮೊದಲನೇ ಶೋ ಗೆಳೆಯರ ಜೊತೆ ನೋಡಿ ಮತ್ತೆ ಕಾಲೇಜಿಗೆ ಹಿಂತಿರುಗಿ ಮೆಕ್ಯಾನಿಕಲ್ ಇಂಜಿನಿಯರಿಂಗ್ classes attend ಮಾಡಿದ್ದು ನೆನಪಾಯಿತು ಎಂದು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ರಮೇಶ್ ಅರವಿಂದ್ ಬರೆದುಕೊಂಡಿದ್ದು ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.
