ಬಾಲಿವುಡ್ ನಟಿ ಭಾಗ್ಯಶ್ರೀ ಅವರು ಈಗಲೂ ಹರೆಯದ ಹುಡುಗಿಯಂತೆಯೇ ಕಾಣುತ್ತಾರೆ. ಅವರ ಚರ್ಮ ತುಂಬಾ ಮೃದು ಹಾಗೂ ಕೋಮಲವಾಗಿದ್ದು, ಕಾಂತಿಯಿಂದ ಕೂಡಿದೆ. ಅವರ ಸ್ಕಿನ್ ಹೀಗಿರಲು ಕಾರಣ ಏನೆಂಬುದನ್ನು ಇದೀಗ ಅವರು ತಿಳಿಸಿದ್ದಾರೆ.
ನಟಿ ಭಾಗ್ಯಶ್ರೀ ತಮ್ಮ ಇನ್ ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿ ಚರ್ಮವನ್ನು ಮೃದು, ಕೋಮಲವಾಗಿಸಲು ಸುಲಭವಾದ, ಅಗ್ಗದ ವಿಧಾನವೊಂದನ್ನು ಸೂಚಿಸಿದ್ದಾರೆ. ಅದೇನೆಂದರೆ ಮುಖಕ್ಕೆ ಗ್ಲಿಸರಿನ್ ಬಳಸುವುದು.
ಹೌದು, ಮುಖ ಮತ್ತು ಕತ್ತಿನ ಮೇಲೆ ಗ್ಲಿಸರಿನ್ ನಿಂದ ಮಸಾಜ್ ಮಾಡಿ ಸುಮಾರು 20 ನಿಮಿಷಗಳ ಕಾಲ ಬಿಟ್ಟು ಬಳಿಕ ತಣ್ಣೀರಿನಿಂದ ವಾಶ್ ಮಾಡಬೇಕು. ಆದರೆ ಇದು ಕಣ್ಣಿಗೆ ಬರದಂತೆ ಎಚ್ಚರ ವಹಿಸಬೇಕಾಗಿ ತಿಳಿಸಿದ್ದಾರೆ.
ಹಾಗೇ ಮಾಲಿನ್ಯದಿಂದ ಶ್ವಾಸಕೋಶಗಳನ್ನು ಸ್ವಚ್ಚಗೊಳಿಸಲು 1 ಚಮಚ ಜೀರಿಗೆಗೆ, 2 ಕರಿಮೆಣಸಿನ ಪುಡಿ ಹಾಕಿ ನೀರಿನಲ್ಲಿ ಕುದಿಸಿ ಚಹಾ ತಯಾರಿಸಿ ಕುಡಿಯುವಂತೆ ತಿಳಿಸಿದ್ದಾರೆ. ಇದರಿಂದ ಎದೆಯಲ್ಲಿರುವ ಲೋಳೆ ಅಂಶ ಹೊರಹೋಗುತ್ತದೆ ಎಂದು ತಿಳಿಸಿದ್ದಾರೆ.