ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಸಿ.ಬಿ.ಯಿಂದ ಬಂಧನಕ್ಕೀಡಾಗಿದ್ದ ಬಾಲಿವುಡ್ ಹಾಸ್ಯ ನಟಿ ಭಾರತಿ ಸಿಂಗ್ ಹಾಗೂ ಪತಿ ಹರ್ಷ ಲಿಂಬಾಚಿಯಾ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಿ ಸಿಂಗ್ ಮನೆ ಮೇಲೆ ದಾಳಿ ನಡೆಸಿದ್ದ ಎನ್ ಸಿಬಿ ಅಧಿಕಾರಿಗಳಿಗೆ 86.5 ಗ್ರಾಂ ಗಾಂಜಾ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತಿ ಸಿಂಗ್ ಹಾಗೂ ಹರ್ಷ ಅವರನ್ನು ಬಂಧಿಸಿ, ಡಿ.4ರವರೆಗೆ ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿತ್ತು.
ಆದರೆ ಭಾರತಿ ಸಿಂಗ್ ದಂಪತಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ ಇದೀಗ ಇಬ್ಬರಿಗೂ ಜಾಮೀನು ನೀಡಿದೆ.