
ಬಾಲಿವುಡ್ ನಟ ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಬಂಧಿಯಾಗಿರುವ ರಿಯಾಗೆ ಇಂದೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಜಾಮೀನು ಅರ್ಜಿ ವಿಚಾರಣೆ ನಡೆಸಿದ ಮುಂಬೈ ಸೆಷನ್ಸ್ ಕೋರ್ಟ್ ನಾಳೆಗೆ ತೀರ್ಪು ಕಾಯ್ದಿರಿಸಿದೆ. ಈ ಕಾರಣಕ್ಕೆ ರಿಯಾ ಇನ್ನೊಂದು ದಿನ ಜೈಲಿನಲ್ಲಿ ಕಳೆಯಬೇಕಾಗಿದೆ.
ಬುಧವಾರ ಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿತ್ತು. ನಾನು ಯಾವುದೇ ಅಪರಾಧ ಮಾಡಿಲ್ಲ. ನನ್ನನ್ನು ಪ್ರಕರಣದಲ್ಲಿ ಸಿಕ್ಕಿ ಹಾಕಿಸಲಾಗ್ತಿದೆ ಎಂದು ನಟಿ ಹೇಳಿದ್ದಳು. ಜಾಮೀನು ಅರ್ಜಿ ಸಲ್ಲಿಸಿದ್ದ ರಿಯಾ ಪರ ವಕೀಲರು, ತಪ್ಪೊಪ್ಪಿಕೊಳ್ಳುವಂತೆ ರಿಯಾಗೆ ಒತ್ತಡ ಹೇರಲಾಗಿದೆ ಎಂದು ಆರೋಪ ಮಾಡಿದ್ದರು.
ಇದೇ ವೇಳೆ ರಿಯಾ ಸಹೋದರ ಶೋಯಿಕ್ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಸುಶಾಂತ್ ಗೆ ಅನೇಕ ಬಾರಿ ಡ್ರಗ್ಸ್ ತಂದುಕೊಟ್ಟಿದ್ದೇನೆ. ಅದಕ್ಕೆ ರಿಯಾ ಹಣ ನೀಡ್ತಿದ್ದಳು ಎಂದು ಶೋಯಿಕ್ ಒಪ್ಪಿಕೊಂಡಿದ್ದಾನಂತೆ. ರಿಯಾ ಕ್ರೆಡಿಟ್ ಕಾರ್ಡ್ ನಲ್ಲಿ ಹಣ ಪಾವತಿ ಮಾಡ್ತಿದ್ದಳು ಎಂದು ಶೋಯಿಕ್ ಹೇಳಿದ್ದಾನೆ ಎನ್ನಲಾಗಿದೆ.