
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಎನ್‌ಸಿಬಿ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿದೆ. ರಿಯಾ ಚಕ್ರವರ್ತಿ, ಸಹೋದರ ಶೌವಿಕ್ ಚಕ್ರವರ್ತಿ, ಸುಶಾಂತ್ ಮಾಜಿ ಹೌಸ್ ಮ್ಯಾನೇಜರ್ ಸ್ಯಾಮ್ಯುಯೆಲ್, ಮನೆಗೆಲಸದ ದೀಪೇಶ್ ಸಾವಂತ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ವಿಚಾರಣೆ ವೇಳೆ ಡ್ರಗ್ಸ್ ಪಾರ್ಟಿಯ ಬಗ್ಗೆ ಸಾಕಷ್ಟು ಮಾಹಿತಿ ಹೊರಗೆ ಬರ್ತಿದೆ. ಬಂಧಿತರು 25 ಬಾಲಿವುಡ್ ಖ್ಯಾತನಾಮರ ಹೆಸರು ಹೇಳಿದ್ದಾರೆ. ಈಗಾಗಲೇ ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್ ಮತ್ತು ಸಿಮೋನೆ ಖಂಭಾಟಾ ಹೆಸರು ಬಹಿರಂಗವಾಗಿದೆ.
ಈಗ ಮತ್ತೊಂದು ಸ್ಟಾರ್ ಹೆಸರು ಹೊರಗೆ ಬಿದ್ದಿದೆ. ನಟಿ ಸುಶಾಂತ್ ತೋಟದ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಳಂತೆ. ಚಿಚೋರ್ ಚಿತ್ರದ ಯಶಸ್ಸಿನ ಹಿನ್ನಲೆಯಲ್ಲಿ ಪಾರ್ಟಿ ಮಾಡಲಾಗಿತ್ತಂತೆ. ಪಾರ್ಟಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡ್ರಗ್ಸ್ ಬಳಕೆಯಾಗಿತ್ತು ಎನ್ನಲಾಗಿದೆ. ಈ ಪಾರ್ಟಿಯಲ್ಲಿ ನಟಿ ಶ್ರದ್ಧಾ ಕಪೂರ್ ಮತ್ತು ಚಿಚೋರ್ ನ ಇತರ ಕಲಾವಿದರು ಪಾಲ್ಗೊಂಡಿದ್ದರು ಎನ್ನಲಾಗಿದೆ.
ಚಿಚೋರ್ ಚಿತ್ರದ ಶೂಟಿಂಗ್ ಪುಣೆಯ ಸಮೀಪದಲ್ಲಿ ನಡೆಯುತ್ತಿದ್ದಾಗ ಶ್ರದ್ಧಾ ಕಪೂರ್ ಒಮ್ಮೆ ತೋಟದ ಮನೆಗೆ ಬಂದಿದ್ದರಂತೆ. ಸಾರಾ ಅಲಿ ಖಾನ್ 2018 ರ ನವೆಂಬರ್‌ನಿಂದ ತೋಟದ ಮನೆಗೆ ಆಗಾಗ ಬರ್ತಿದ್ದರು ಎಂದು ಮ್ಯಾನೇಜರ್ ಹೇಳಿದ್ದರು.