ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ಬಳಿಕ ನಟಿ ಐಂದ್ರಿತಾ ರೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಮತ್ತೆ ವಿಚಾರಣೆಗೆ ಕರೆದರೆ ಹೋಗುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಆರ್.ಆರ್. ನಗರದ ಬಾಲ್ಕನಿಯಿಂದಲೇ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಐಂದ್ರಿತಾ, ಸಿಸಿಬಿಯಿಂದ ಒಂದು ಸುತ್ತಿನ ವಿಚಾರಣೆ ಮುಗಿದಿದೆ. ವಿಚಾರಣೆಗೆ ನಾವು ಸಹಕರಿಸುತ್ತೇವೆ. ಮತ್ತೆ ಕರೆದರೆ ಮತೆ ಹೋಗುತ್ತೇವೆ ಎಂದರು. ಇನ್ನು ಡ್ರಗ್ಸ್ ಪ್ರಕರಣದ ಬಗ್ಗೆ ನಾವು ಏನೂ ಮಾತನಾಡುವುದಿಲ್ಲ. ವಿಚಾರಣೆ ನಡೆಯುತ್ತಿರುವುದರಿಂದ ಹೆಚ್ಚಿನ ಪ್ರತಿಕ್ತಿಯೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
ನಾಳೆಯಿಂದ ಶೂಟಿಂಗ್ ಕೂಡ ಆರಂಭವಾಗುತ್ತಿದ್ದು, ನಟ ದಿಗಂತ್ ಶೂಟಿಂಗ್ ಗೆ ಹೋಗುತ್ತಿದ್ದಾರೆ ಎಂದು ಇದೇ ವೇಳೆ ತಿಳಿಸಿದ್ದಾರೆ.