ಈಗಾಗಲೇ ಡ್ರಗ್ಸ್ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ನಟಿಯರನ್ನು ಬಂಧಿಸಲಾಗಿದೆ. ಸ್ಯಾಂಡಲ್ ವುಡ್ ನ ಇಬ್ಬರು ನಟಿಯರು ಹಾಗೂ ಬಾಲಿವುಡ್ ನ ಒಬ್ಬ ನಟಿಯನ್ನು ಬಂಧಿಸಲಾಗಿದೆ. ಈ ಕುರಿತು ನಟಿ ಪಾರುಲ್ ಯಾದವ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಅಂತಿಮವಾಗಿ ಲಿಂಗ ಸಮಾನತೆಗಾಗಿ ಹೋರಾಟ ಗೆದ್ದಿದೆ. ಡ್ರಗ್ಸ್ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡಬೇಕು. ಆದರೆ ಸ್ಪಷ್ಟವಾಗಿ ಭಾರತದಲ್ಲಿ ಡ್ರಗ್ಸ್ ಮಾರಾಟಗಾರರು/ಬಳಕೆದಾರರು ಮೂವರು ಮಹಿಳೆಯರು ಅಷ್ಟೇನಾ……ಬೇರೆ ಯಾರು ಭಾಗಿ ಆಗಿಲ್ಲವೇ…? ಕಾರ್ಪೊರೇಟ್ ಎಕ್ಸಿಕ್ಯೂಟ್ ಗಳು, ಉದ್ಯಮಿಗಳು, ಕ್ರೀಡಾಪಟುಗಳು ಅಥವಾ ನಟರು ಮಾದಕ ವಸ್ತುಗಳನ್ನು ಬಳಸುತ್ತಿಲ್ಲವೇ..? ಲಿಂಗ ಸಮಾನತೆ ಹಕ್ಕನ್ನು ಗೆದ್ದಿದ್ದೇವೆ ಎಂದು ವಿಜಯೋತ್ಸವ ಆಚರಿಸಬೇಕೇ ಅಥವಾ ನಮ್ಮಲ್ಲಿ ಕೆಲವರಿಗೆ ಬೇಟೆಯಾಡುವುದು ಎಷ್ಟು ಸುಲಭ ಎಂದು ನಾವು ಅಳಬೇಕೇ ಎಂದು ಪಾರುಲ್ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.