ಕೊರೊನಾದಿಂದಾಗಿ ಸಿನಿಮಾ ಥಿಯೇಟರ್‌ಗಳು ಬಂದ್ ಆಗಿವೆ. ಇತ್ತ ಚಿತ್ರೀಕರಣ ಕೂಡ ನಡೆಯುತ್ತಿಲ್ಲ. ಹೀಗಾಗಿ ರಾಮ್ ಗೋಪಾಲ್ ವರ್ಮಾ, ಇಂತಹ ಸಮಯದಲ್ಲಿ ಹಣ ಮಾಡಲು ಹೊಸದೊಂದು ದಾರಿ ಹಿಡಿದಿದ್ದರು. ಆದರೆ ಇದೀಗ ಅದಕ್ಕೆ ತಣ್ಣೀರೆರೆಚಿದಂತಾಗಿದೆ.
ಹೌದು, ಪವರ್ ಸ್ಟಾರ್ ಸಿನಿಮಾ ತಯಾರಾಗುತ್ತಿರುವುದು ಗೊತ್ತಿರುವ ವಿಚಾರವೇ. ಇದೀಗ ಈ ಸಿನಿಮಾದ ಟ್ರೇಲರ್ ನೋಡಲು 25 ರೂಪಾಯಿ ನೀಡಬೇಕು ಎಂದು ಆರ್‌ಜಿವಿ ಹೇಳಿದ್ದರು. ಆರ್‌ಜಿವಿ ವರ್ಲ್ಡ್ ಥಿಯೇಟರ್ ವೆಬ್‌ಸೈಟ್‌ನಲ್ಲಿ ಅವರ ಪವರ್ ಸ್ಟಾರ್ ಸಿನಿಮಾದ ಟ್ರೇಲರ್ ರಿಲೀಸ್ ಆಗಬೇಕಿತ್ತು. ಇದಕ್ಕೆ ಅನೇಕ ಮಂದಿ ಹಣ ಕೂಡ ನೀಡಿದ್ದರು. ಆದರೆ ಇವರ ಕನಸು ನನಸಾಗಲೇ ಇಲ್ಲ.
ವೆಬ್‌ಸೈಟ್‌ನಲ್ಲಿ ರಿಲೀಸ್ ಆಗುವುದಕ್ಕೂ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಟ್ರೇಲರ್ ಲೀಕ್ ಆಗಿದೆ. ನಿಜಕ್ಕೂ ಈ ವಿಚಾರವಾಗಿ ಆರ್‌ಜಿವಿ ಶಾಕ್ ಆಗಿದ್ದಾರೆ. ಅಷ್ಟೆ ಅಲ್ಲ, ಅಧಿಕೃತವಾಗಿ ವೆಬ್‌ಸೈಟ್‌ನಲ್ಲಿ ಟ್ರೇಲರ್ ಲಾಂಚ್ ಮಾಡೋದಾಗಿ ಹೇಳಿದ್ದಾರೆ. ಇನ್ನು ಯಾರೆಲ್ಲಾ ಹಣ ನೀಡಿದ್ದಾರೋ ಅವರಿಗೆ ಆ ಹಣವನ್ನು ವಾಪಸ್ ಮಾಡುತ್ತೇವೆ ಎಂದು ಹೇಳಿದ್ದಾರೆ.