ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನವರಸನಾಯಕ ಜಗ್ಗೇಶ್ ತಮ್ಮ ಪ್ರತಿಯೊಂದು ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ ನಟ ಜಗ್ಗೇಶ್ ಜ್ಯೋತಿಷ್ಯ ನಂಬುವ ಬದಲು ನಿಮ್ಮ ನೀವು ನಂಬಿ ಎಂದು ಟ್ವೀಟ್ ಮಾಡಿದ್ದಾರೆ.
2020 ಆರಂಭಕ್ಕೆ ಬಹುತೇಕ ಜ್ಯೋತಿಷಿಗಳು ವಾಡಿಕೆಯಂತೆ ಈ ವರ್ಷ ಅದ್ಬುತ ಮಳೆಬೆಳೆ!ಕೆಲರಾಶಿಗಳಿಗೆ ಶನಿ ಗುರು ಉತ್ತಮಫಲ ಎಂದು ಆನೆಕುದುರೆ ಮೇಲೆ ಸವಾರಿ ಮಾಡಿ ಹೇಳಿಬಿಟ್ಟರು!ಆದರೆ ಕೊರೋನಾ ವಿಶ್ವ ಮನುಕುಲಕ್ಕೆ ಹೀಗೆ ಗುಮ್ಮಿ ಅಮಾಯಕರ ಸಾವುನೋವು ನಷ್ಟ ಆಗುತ್ತದೆ ಎಂದು ಹೇಳಲಿಲ್ಲ!ಜ್ಯೋತಿಷ್ಯ ಕ್ಕಿಂತ ನಿಮ್ಮ ನೀವು ನಂಬಿ! ನೀವು ಸರಿಯಿದ್ದರೆ ಜೀವಜಗ ಸರಿಯಿರುತ್ತದೆ! ಎಂದು ಜಗ್ಗೇಶ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.