ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಮಾಹಿತಿ ಹೊರಗೆ ಬರ್ತಿದೆ. ಸಿಬಿಐ ಪ್ರಕರಣದ ಬಗ್ಗೆ ಸಾಕಷ್ಟು ಮಾಹಿತಿ ಕಲೆ ಹಾಕ್ತಿದೆ. ಸುಶಾಂತ್ ಸಿಂಗ್ ಜೂನ್ 14ರಂದು ಸಾವನ್ನಪ್ಪಿದ್ದರು. ಅವರ ಫ್ಲಾಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಸಿಕ್ಕಿತ್ತು.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ಈಗ ಹೊಸ ಸಂಗತಿ ಹೊರಗೆ ಹಾಕಿದೆ. ಜೂನ್ 13ರ ಮಧ್ಯಾಹ್ನದಿಂದಲೇ ಸುಶಾಂತ್ ಮೊಬೈಲ್ ಕರೆ ಹಾಗೂ ಸಂದೇಶಗಳಿಗೆ ಪ್ರತಿಕ್ರಿಯೆ ಮಾಡಿರಲಿಲ್ಲ ಎಂಬುದು ಗೊತ್ತಾಗಿದೆ. ಸುಶಾಂತ್ ಜೂನ್ 13ರ ಮಧ್ಯಾಹ್ನದಿಂದಲೇ ಮೊಬೈಲ್ ಬಳಕೆ ಮಾಡಿರಲಿಲ್ಲವಂತೆ.
ಸುಶಾಂತ್ ಫ್ಲಾಟ್ ಲೈಟ್ ಕೂಡ ಜೂನ್ 13ರ ರಾತ್ರಿ ಬೇಗ ಬಂದ್ ಆಗಿತ್ತಂತೆ. ಹಾಗೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸುಶಾಂತ್ ಎಷ್ಟು ಗಂಟೆ ಹಿಂದೆ ಸಾವನ್ನಪ್ಪಿದ್ದರು ಎಂಬ ಬಗ್ಗೆ ಮಾಹಿತಿಯಿಲ್ಲ. ಇವೆಲ್ಲವೂ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಸಿಬಿಐ ಶೀಘ್ರವೇ ಸುಶಾಂತ್ ಸಾವಿನ ಬಗ್ಗೆ ವರದಿ ನೀಡಲಿದೆ ಎನ್ನಲಾಗ್ತಿದೆ. ಸುಶಾಂತ್ ಜೂನ್ 13ರಂದು 2 ಗಂಟೆಗೆ ಮ್ಯಾನೇಜರ್ ಜೊತೆ ಮಾತನಾಡಿದ್ದರಂತೆ. ಜೂನ್ 14ರ ಬೆಳಿಗ್ಗೆ ಜ್ಯೂಸ್ ನೀಡಿದ್ದೆ ಎಂದು ಮನೆಕೆಲಸದವರು ಹೇಳಿದ್ದಾರೆ. ಆದ್ರೆ ಸುಶಾಂತ್ ಹೊಟ್ಟೆ ಖಾಲಿಯಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.