ಇಂದು ನಿರ್ಮಾಪಕ ಜಾಕ್ ಮಂಜು ಅವರ ಹುಟ್ಟುಹಬ್ಬವಾಗಿದ್ದು, ಸಾಕಷ್ಟು ಸಿನಿಮಾ ಕಲಾವಿದರು ಶುಭಾಶಯ ತಿಳಿಸಿದ್ದಾರೆ. ನಟ ಕಿಚ್ಚ ಸುದೀಪ್ ಕೂಡ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ್ದಾರೆ.
ನಮ್ಮ ಶಾಲಾ ದಿನಗಳಲ್ಲಿ ಹೊಂಬೇಗೌಡ ಗ್ರೌಂಡ್ ವಿಲ್ಸನ್ ಗಾರ್ಡನ್ ನಲ್ಲಿ ಕ್ರಿಕೆಟ್ ಆಟವಾಡುತ್ತಿದ್ದಾಗಿನಿಂದ ಫ್ಯಾಂಟಮ್ ಚಿತ್ರದ ತನಕ ನಮ್ಮ ಪ್ರಯಾಣವು ಒಂದು ಸ್ಮರಣೀಯ ಸಂಗತಿಯಾಗಿದೆ. ಸ್ನೇಹಿತ ಹಾಗೂ ಸಹೋದರ ನೀವು ಯಾವಾಗಲೂ ಸಂತೋಷದಲ್ಲಿರಿ ಎಂದು ಬರೆದುಕೊಂಡಿದ್ದಾರೆ.