
ನಟ ಶರಣ್ ಇಂದು ತಮ್ಮ 49ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಶರಣ್ ‘ಪ್ರೇಮ ಪ್ರೇಮ ಪ್ರೇಮ’ ಎಂಬ ಸಿನಿಮಾದಲ್ಲಿ ಕಾಮಿಡಿ ಕಲಾವಿದನಾಗಿ ಅಭಿನಯಿಸುವ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಸಾಕಷ್ಟು ಚಿತ್ರಗಳಲ್ಲಿ ಹಾಸ್ಯ ನಟನಾಗಿ ನಟಿಸಿದರು.
ನಟ ಶರಣ್ 2012ರಂದು ಎಮ್ ಎಸ್ ಶ್ರೀನಾಥ್ ನಿರ್ದೇಶನದ ರ್ಯಾಂಬೋ ಸಿನಿಮಾದಲ್ಲಿ ಮೊದಲ ಬಾರಿ ನಾಯಕ ನಟನಾಗಿ ಅಭಿನಯಿಸಿದ ನಂತರ ನಾಯಕನಟನಾಗಿ ಹೊರಹೊಮ್ಮಿದರು. ನಟ ಶರಣ್ 1972 ಫೆಬ್ರವರಿ 6ರಂದು ಜನಿಸಿದ್ದು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.