ಅನೀಶ್ ನಟಿಸಿ ನಿರ್ದೇಶಿಸಿರುವ ‘ರಾಮಾರ್ಜುನ’ ಸಿನಿಮಾ ಇದೇ ತಿಂಗಳು ಜನವರಿ 29ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಈ ಚಿತ್ರದ ಟ್ರೇಲರ್ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ಸೌಂಡ್ ಮಾಡಿದೆ ಅನೀಶ್ ಲುಕ್ ಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ ಈ ಚಿತ್ರದಲ್ಲಿ ಅನೀಶ್ ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟ ಅನೀಶ್, ತುಂಬ ದಿನಗಳ ನಿಮ್ಮ ಪ್ರಶ್ನೆಗೆ ಉತ್ತರ. ನಾನು ನಟಿಸಿ ನಿರ್ದೇಶನ ಮಾಡಿರುವ ರಾಮಾರ್ಜುನ ಸಿನಿಮಾ ಇದೆ ಜನವರಿ 29ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ನಮ್ಮ ತಂಡದ ಮೇಲೆ ಇರಲಿ.. ನಮ್ಮ ಸಿನಿಮಾವನ್ನು ನೋಡಿ ಮೆಚ್ಚಿದ ರಕ್ಷಿತ್ ಶೆಟ್ಟಿ ಹಾಗೂ krg ಸ್ಟುಡಿಯೋಸ್ ನ ಕಾರ್ತಿಕ್ ಗೌಡ ಅವರು ಮುಂದೆ ನಿಂತು ಅರ್ಪಿಸುತ್ತಿದ್ದಾರೆ, ನಿಮ್ಮ ಮುಂದೆ ನನ್ನ ಕನಸಿನ ಕೂಸು ರಾಮಾರ್ಜುನ ಬರ್ತಾಯಿದೆ ಹರಸಿ ಆಶೀರ್ವದಿಸಿ. ನಿಮ್ಮ ಅನಿಶ್ ಎಂದು ಬರೆದುಕೊಂಡಿದ್ದಾರೆ.
https://www.instagram.com/p/CKOG1uAJlGN/?utm_source=ig_web_copy_link