
ದಿನೇಶ್ ಬಾಬು ನಿರ್ದೇಶನದ ಶಾನ್ವಿ ಶ್ರೀವಾಸ್ತವ ಅಭಿನಯದ ‘ಕಸ್ತೂರಿ ಮಹಲ್’ ಚಿತ್ರದ ಟೀಸರ್ ಅನ್ನು ಜನವರಿ 1 ಹೊಸ ವರ್ಷದ ಪ್ರಯುಕ್ತ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಚಿಕ್ಕಮಗಳೂರಿನಲ್ಲಿ ಕೇವಲ 20 ದಿನಗಳಲ್ಲಿ ಈ ಚಿತ್ರದ ಶೂಟಿಂಗ್ ಅನ್ನು ಪೂರ್ಣಗೊಳಿಸಿದ್ದರು. ಹಾರರ್ ಥ್ರಿಲ್ಲರ್ ಕಥೆ ಒಳಗೊಂಡಿರುವ ಸಿನಿಮಾ ಇದಾಗಿದ್ದು, ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಹೆಚ್ಚಿಸಿದೆ.