
ಕನ್ನಡ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಸರ್ಜಾ ಭಾನುವಾರದಂದು ವಿಧಿವಶರಾಗಿದ್ದು, ಸೋಮವಾರ ಅವರ ಅಂತ್ಯಕ್ರಿಯೆ ಸಹೋದರ ಧ್ರುವ ಸರ್ಜಾ ಅವರ ಫಾರಂ ಹೌಸ್ ನಲ್ಲಿ ನಡೆದಿದೆ.
ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಕುಟುಂಬ ಸದಸ್ಯರು ಹಾಗೂ ಚಿತ್ರರಂಗದ ಗಣ್ಯರು ಪಾಲ್ಗೊಂಡು ಚಿರಂಜೀವಿ ಸರ್ಜಾ ಅವರಿಗೆ ಅಂತಿಮ ವಿದಾಯ ಹೇಳಿದ್ದಾರೆ.
ಇದೀಗ ಚಿರಂಜೀವಿ ಸರ್ಜಾ ಅವರ ನಿವಾಸದಲ್ಲಿ ನೀರವ ಮೌನ ಆವರಿಸಿದ್ದು, ಚಿರಂಜೀವಿ ಸರ್ಜಾ ಅಕಾಲಿಕ ನಿಧನಕ್ಕೆ ಎಲ್ಲರೂ ಕಣ್ಣೀರು ಮಿಡಿಯುತ್ತಿದ್ದಾರೆ. ಕುಟುಂಬ ವರ್ಗದವರು ಮಾತ್ರವಲ್ಲದೆ ಅಭಿಮಾನಿಗಳಿಗೂ ಸಹ ನೆಚ್ಚಿನ ನಟನ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.