ಬೆಂಗಳೂರು: ಹೆಚ್ಚುತ್ತಿರುವ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೊಸ ಗೈಡ್ ಲೈನ್ಸ್ ಜಾರಿಗೆ ತಂದಿದ್ದು, ಥಿಯೇಟರ್ ಗಳಲ್ಲಿ ಶೇ.50ರಷ್ಟು ಮಾತ್ರ ಆಸನ ವ್ಯವಸ್ಥೆಗೆ ಅವಕಾಶ ನೀಡಿದೆ. ಸರ್ಕಾರದ ಈ ನಿರ್ಧಾರವನ್ನು ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಸ್ವಾಗತಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸುದೀಪ್, ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಸೀಟ್ ಭರ್ತಿ ಎಂಬುದು ನಿಜಕ್ಕೂ ಸಂಕಷ್ಟದ ವಿಷಯ. ಆಗಷ್ಟೇ ಬಿಡುಗಡೆಯಾದ ಚಿತ್ರಕ್ಕೆ ಇದು ಶಾಕಿಂಗ್ ವಿಚಾರ. ಆದರೆ ಒಂದು ಒಳ್ಳೆಯ ಉದ್ದೇಶಕ್ಕೆ ಈ ನಿಯಮ ಜಾರಿಮಾಡಲಾಗಿದೆ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸರ್ಕಾರದ ನಿರ್ಧಾರ ಗೌರವಿಸುವುದು ಕರ್ತವ್ಯ ಎಂದಿದ್ದಾರೆ.
25 ದಿನ ಪೂರೈಸಿದ ‘ರಾಬರ್ಟ್’ ಸಿನಿಮಾ
ಸರ್ಕಾರದ ಹೊಸ ನಿಯಮದ ಪರಿಣಾಮ ಎರಡು ದಿನಗಳ ಹಿಂದಷ್ಟೇ ತೆರೆಕಂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಯುವರತ್ನ’ ಚಿತ್ರದ ಮೇಲಾಗಿದ್ದು, ಈ ಬಗ್ಗೆ ಸುದೀಪ್ ಯುವರತ್ನನಿಗೆ ಧೈರ್ಯ ತುಂಬಿದ್ದಾರೆ. ಈ ಪರಿಸ್ಥಿತಿಯನ್ನು ಗೆದ್ದು ಯಶಸ್ವಿಯಾಗಿ ಹೊರಹೊಮ್ಮುವ ಶಕ್ತಿ ಯುವರತ್ನ ಚಿತ್ರಕ್ಕೆ ನೀಡಲಿ ಎಂದು ಹಾರೈಸಿದ್ದಾರೆ.