ನಟಿ ಊರ್ವಶಿ ರೌತೆಲಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಒಂದು ಪೋಸ್ಟ್ ಫುಲ್ ವೈರಲ್ ಆಗಿದೆ. ನಿಜಕ್ಕೂ ಆ ಪೋಸ್ಟ್ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಕಾರಣ ಈ ನಟಿಯ ಗೆಳೆಯ ಫೆಬ್ರವರಿ 30ರಂತೆ. ಅವನು ಅಸ್ತಿತ್ವದಲ್ಲಿಲ್ಲವಂತೆ.
ಹೌದು, ಈ ನಟಿ ಸಾಮಾಜಿಕ ಮಾಧ್ಯಮದಲ್ಲಿ ತಮಾಷೆಯ ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ತನ್ನದೊಂದು ಫೋಟೋ ಹಾಕಿರುವ ಈ ನಟಿ ನನ್ನ ಗೆಳೆಯ ಫೆಬ್ರವರಿ 30 ರಂತೆ ಅವನು ಅಸ್ತಿತ್ವದಲ್ಲಿಲ್ಲ ಎಂದು ಬರೆದುಕೊಂಡಿದ್ದಾರೆ. ನಿಜಕ್ಕೂ ಇದು ತಮಾಷೆಯ ವಿಚಾರವೇ.
ಇದರ ಜೊತೆಗೆ ವರ್ಜಿಲ್ ಭಾನುಪ್ರಿಯಾ ಜುಲೈ 16 ರಂದು ಪ್ರಸಾರವಾಗಲಿದೆ ಎಂದು ಹೇಳಿದ್ದಾರೆ. ಇನ್ನು ಇದೇ ವೇಳೆ ಟ್ರೈಲರ್ಗೆ ನೀವು ನೀಡಿದ ಪ್ರೀತಿ ಅಭಿಮಾನಕ್ಕಾಗಿ ತುಂಬು ಹೃದಯದ ಧನ್ಯವಾದಗಳು ಎಂದು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
https://www.instagram.com/p/CCQDeQsB9L7/?igshid=1fbg1hnqmoci6