ಉತ್ತರ ಪ್ರದೇಶದ ಹತ್ರಾಸ್ ಮತ್ತು ಬಲರಾಂಪುರದಲ್ಲಿ ನಡೆದ ಘಟನೆ ಇಡೀ ದೇಶದಾದ್ಯಂತ ಚರ್ಚೆಯಲ್ಲಿದೆ. ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗ್ತಿದೆ. ಅನೇಕ ಬಾಲಿವುಡ್ ತಾರೆಯರು ಈ ವಿಷಯಗಳ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅನುಷ್ಕಾ ಶರ್ಮಾ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ಗರ್ಭಿಣಿ ಅನುಷ್ಕಾ ಈ ಘಟನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಂಡು ಮತ್ತು ಹೆಣ್ಣು ಮಕ್ಕಳ ನಡುವಿನ ವ್ಯತ್ಯಾಸ ಮತ್ತು ಜನರ ಮನಸ್ಥಿತಿಯನ್ನು ಪ್ರಶ್ನಿಸಿದ್ದಾರೆ. ಗಂಡು ಮಗುವಾಗುವುದು ಮಾತ್ರ ವಿಶೇಷಾಧಿಕಾರವಾ ಎಂದು ಅನುಷ್ಕಾ ಪ್ರಶ್ನೆ ಮಾಡಿದ್ದಾರೆ.
ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ ನಟಿ, ಸಮಾಜದಲ್ಲಿ ಗಂಡು ಮಗು ಜನಿಸಿದ್ರೆ ವಿಶೇಷಾಧಿಕಾರದ ರೂಪದಲ್ಲಿ ನೋಡಲಾಗುತ್ತದೆ. ಹೆಣ್ಣು ಮಗು ಜನಿಸಿದರೆ ಯಾವುದೇ ಮಹತ್ವ ನೀಡಲಾಗುವುದಿಲ್ಲ. ಇನ್ನೂ ಹಳೆ ಕಾಲದ ಪದ್ಧತಿಯನ್ನು ಅನುಸರಿಸುತ್ತಿದ್ದಾರೆಂದು ಅನುಷ್ಕಾ ಬರೆದುಕೊಂಡಿದ್ದಾರೆ. ಗಂಡು ಮಗನಿಗೆ ಹೆಣ್ಣು ಮಕ್ಕಳನ್ನು ಗೌರವಿಸುವುದನ್ನು ಕಲಿಸಿ. ಗಂಡು ಮಗುವಾಗುವುದು ಒಂದು ವಿಶೇಷ ಅಧಿಕಾರವಲ್ಲ ಎಂದಿದ್ದಾರೆ.
ಮಗುವಿನ ಲಿಂಗವನ್ನು ಘನತೆ ರೂಪದಲ್ಲಿ ನೋಡಬೇಕು. ಸಮಾಜಕ್ಕೆ ಉತ್ತಮ ಮಗುವನ್ನು ನೀಡುವ ಜವಾಬ್ದಾರಿ ತೆಗೆದುಕೊಳ್ಳಿ ಎಂದು ಅನುಷ್ಕಾ ಹೇಳಿದ್ದಾರೆ.