ಕೊರೊನಾ ವೈರಸ್ ಬಾಲಿವುಡ್ ನ ಅನೇಕ ಕಲಾವಿದರನ್ನು ಕಾಡ್ತಿದೆ. ಅಕ್ಷಯ್ ಕುಮಾರ್, ವಿಕ್ಕಿ ಕೌಶಲ್, ಭೂಮಿ ಪೆಡ್ನೇಕರ್, ರೂಪಾ ಗಂಗೂಲಿ, ಆಲಿಯಾ ಭಟ್ ಸೇರಿದಂತೆ ಅನೇಕ ಕಲಾವಿದರು ಕೊರೊನಾ ಪಾಸಿಟಿವ್ ಆಗಿದ್ದಾರೆ. ಈ ಮಧ್ಯೆ ನಟ ಮಿಲಿಂದ್ ಸೋಮನ್ ಕೊರೊನಾ ಗೆದ್ದು ಬಂದಿದ್ದಾರೆ.
ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಫಿಟ್ ಕಲಾವಿದರಲ್ಲಿ ಒಬ್ಬರಾಗಿರುವ ಮಿಲಿಂದ್ ಸೋಮನ್, ಕೊರೊನಾ ಪಾಸಿಟಿವ್ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು. ಈಗ ಕೊರೊನಾ ನೆಗೆಟಿವ್ ಖುಷಿ ವಿಷ್ಯ ಹಂಚಿಕೊಂಡಿದ್ದಾರೆ.
ಇದೇ ವೇಳೆ ಮಿಲಿಂದ್ ಸೋಮನ್, ಕೊರೊನಾ ವೇಳೆ ತಾವು ಕುಡಿದ ಕಷಾಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಕಷಾಯ ಶೀಘ್ರವೇ ಚೇತರಿಸಿಕೊಳ್ಳಲು ನೆರವಾಯಿತು ಎಂದಿದ್ದಾರೆ. ಕೊರೊನಾ ಲಕ್ಷಣ ಸೌಮ್ಯವಾಗಿತ್ತು. ಹಾಗಾಗಿ ನಾನು ಕೊತ್ತಂಬರಿ, ಮೆಂತ್ಯ ಕಾಳು, ಕರಿಮೆಣಸು, ತುಳಸಿ ಎಲೆ, ಶುಂಠಿ ಮತ್ತು ಬೆಲ್ಲದಿಂದ ಮಾಡಿದ ಕಷಾಯವನ್ನು ಕುಡಿಯುತ್ತಿದ್ದೆ. ವೈದ್ಯರ ಸಲಹೆ ಮೇರೆಗೆ Blood Thinner ತೆಗೆದುಕೊಂಡೆ ಎಂದು ಮಿಲಿಂದ್ ಹೇಳಿದ್ದಾರೆ. ಎಲ್ಲ ಸಂದರ್ಭದಲ್ಲಿಯೂ ವೈದ್ಯರ ಆದೇಶ ಪಾಲಿಸಿದ್ದೇನೆಂದು ಅವರು ಹೇಳಿದ್ದಾರೆ.