ಕೆಜಿಎಫ್ ಅಭಿಮಾನಿಗಳಿಗೆ ಕೆಜಿಎಫ್ ಚಾಪ್ಟರ್-2 ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಅಭಿಮಾನಿಗಳು ಚಿತ್ರ ವೀಕ್ಷಣೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ನಟಿಸಿದ್ದಾರೆ. ಇಂದು ಸಂಜಯ್ ದತ್ ಗೆ ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬಕ್ಕೆ ಕೆಜಿಎಫ್ ಚಾಪ್ಟರ್-2 ತಂಡ ಭರ್ಜರಿ ಉಡುಗೊರೆ ನೀಡಿದೆ.
ಕೆಜಿಎಫ್ ಚಾಪ್ಟರ್-2ನ ಪೋಸ್ಟರ್ ಒಂದನ್ನು ಚಿತ್ರತಂಡ ಇಂದು ಬಿಡುಗಡೆ ಮಾಡಿದೆ. ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಂಜಯ್ ದತ್, ನಿರ್ದೇಶಕ ಪ್ರಶಾಂತ್ ನೀಲ್, ರಾಕಿಂಗ್ ಸ್ಟಾರ್ ಯಶ್ ಗೆ ಧನ್ಯವಾದ ಹೇಳಿದ್ದಾರೆ. ಹುಟ್ಟುಹಬ್ಬಕ್ಕೆ ಇದಕ್ಕಿಂತ ಬೆಸ್ಟ್ ಉಡುಗೊರೆ ಸಿಗಲು ಸಾಧ್ಯವಿಲ್ಲ ಎಂದಿದ್ದಾರೆ.
ಪ್ರಶಾಂತ್ ನೀಲ್ ಕೂಡ ಪೋಸ್ಟರ್ ಪೋಸ್ಟ್ ಮಾಡಿ ಸಂಜಯ್ ದತ್ ಗೆ ಶುಭಕೋರಿದ್ದಾರೆ.ಪೋಸ್ಟರ್ ನಲ್ಲಿ ಸಂಜಯ್ ದತ್ ಲುಕ್ ಭಯ ಹುಟ್ಟಿಸುವಂತಿದೆ. ಪೋಸ್ಟರ್, ಚಿತ್ರದ ಬಗ್ಗೆ ಮತ್ತೊಂದಿಷ್ಟು ಕುತೂಹಲ ಹೆಚ್ಚಿಸಿದೆ.
https://www.instagram.com/p/B0fSXt0HUyG/?utm_source=ig_embed