alex Certify ʼಸೌಂದರ್ಯʼದ ಗುಟ್ಟು ಬಿಚ್ಚಿಟ್ಟ ನಟಿ ಕಾಜಲ್ ಅಗರ್ವಾಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸೌಂದರ್ಯʼದ ಗುಟ್ಟು ಬಿಚ್ಚಿಟ್ಟ ನಟಿ ಕಾಜಲ್ ಅಗರ್ವಾಲ್

ಜನಪ್ರಿಯ ನಟಿ ಕಾಜಲ್ ಅಗರ್ವಾಲ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ಅಭಿನಯದೊಂದಿಗೆ ಆಕರ್ಷಕವಾಗಿ ಸದಾ ಹೊಳೆಯುವ ತ್ವಚೆಯ ಒಳಗುಟ್ಟನ್ನು ಕಾಜಲ್ ಇದೀಗ ಹಂಚಿಕೊಂಡಿದ್ದಾರೆ.

ಕಾಜಲ್ ಅವರಿಗಾಗಿಯೇ ತಾಯಿ ಮಾಂತ್ರಿಕ ಫೇಸ್ ಪ್ಯಾಕ್ ತಯಾರಿಸುತ್ತಾರಂತೆ. ಹಾಗಾಗಿ ಇದರ ಕ್ರೆಡಿಟ್ ಅನ್ನು ಸಂಪೂರ್ಣವಾಗಿ ತಾಯಿಗೇ ಅರ್ಪಿಸುತ್ತಾರೆ. ಜೇನುತುಪ್ಪ, ನಿಂಬೆ ರಸ ಮತ್ತು ಮೊಸರಿನ ಮಿಶ್ರಣವನ್ನು ಆಯಾ ಕಾಲಕ್ಕೆ ಅನುಗುಣವಾಗಿ ಮುಖವನ್ನು ಶುದ್ಧೀಕರಿಸಲು ಬಳಸುವುದಾಗಿ ಹೇಳಿಕೊಂಡಿದ್ದಾರೆ.

ಮುಖದಿಂದ ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಕಾಜಲ್ ಬಾದಾಮಿಯನ್ನು ಬಳಸುತ್ತಾರೆ, ಬಾದಾಮಿಯನ್ನು ಪುಡಿಮಾಡಿ ವಾರಕ್ಕೊಮ್ಮೆ ಅದನ್ನು ಸ್ಕ್ರಬ್ ರೀತಿ ಬಳಸುತ್ತಾರೆ, ಕೆಲವು ನಿಮಿಷಗಳ ಕಾಲ ಮುಖದಲ್ಲಿ ಇಟ್ಟುಕೊಂಡು ನಂತರ ತೊಳೆಯುತ್ತಾರೆ.

ಕಾಜಲ್ ಹೆಚ್ಚಾಗಿ ತೆಂಗಿನಕಾಯಿ ಆಧಾರಿತ ಉತ್ಪನ್ನಗಳನ್ನು ಬಳಸುತ್ತಾರೆ, ಏಕೆಂದರೆ ಅವರ ಪ್ರಕಾರ ತ್ವಚೆಗೆ ನೈಸರ್ಗಿಕ ಹೊಳಪನ್ನು ನೀಡುವುದು ತೆಂಗಿನೆಣ್ಣೆ ಮಾತ್ರವಂತೆ.

ನೀವು ಉತ್ತಮವಾಗಿ ಕಾಣಬೇಕಾದರೆ ನೀವು ಕಠಿಣ ಪರಿಶ್ರಮವನ್ನು ಹೊಂದಿರಬೇಕು ಎನ್ನುವ ಕಾಜಲ್ ತನ್ನ ಸಿಟಿಎಂ (ಕ್ಲೆನ್ಸಿಂಗ್, ಟೋನಿಂಗ್ ಮತ್ತು ಮಾಯಿಸ್ಚರೈಸಿಂಗ್) ದಿನಚರಿಯನ್ನು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ.

ಮುಖದ ಮೇಲಿನ ಎಲ್ಲಾ ಕಲ್ಮಶಗಳನ್ನು ತೊಡೆದುಹಾಕಲು ಮತ್ತು ನೈಸರ್ಗಿಕ ಹೊಳಪನ್ನು ಪಡೆಯಲು ಕಾಜಲ್ ವಾರಕ್ಕೊಮ್ಮೆ ಮುಲ್ತಾನಿ ಮಿಟ್ಟಿ ಫೇಸ್ ಮಾಸ್ಕ್ ಅನ್ನು ಬಳಸುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...