ಪ್ರಭಾಸ್ ನಟನೆಯ ‘ಬಾಹುಬಲಿ’ ಪಾರ್ಟ್ 1 ಸಿನಿಮಾವನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ನವೆಂಬರ್ 15 ರಂದು 4-30ಕ್ಕೆ ಪ್ರಸಾರ ಮಾಡುತ್ತಿದ್ದಾರೆ.
ರಾಜಮೌಳಿ ನಿರ್ದೇಶನದ ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ ಭಾರತೀಯ ಸಿನಿಮಾರಂಗದಲ್ಲಿ ದಾಖಲೆ ಸೃಷ್ಟಿಸಿತ್ತು.
ಈಗಾಗಲೇ ಸಾಕಷ್ಟು ಧಾರವಾಹಿಗಳು ಹಾಗೂ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಪ್ರೇಕ್ಷಕರ ಗಮನ ಸೆಳೆಯುವ ಮೂಲಕ ರೆಕಾರ್ಡ್ ಮಾಡಿವೆ. ಈಗ ಬಾಹುಬಲಿ ಸಿನಿಮಾ ಕೂಡ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.