ನಟಿ ಕತ್ರೀನಾ ಕೈಫ್ ಫಿಟ್ನೆಸ್ ಹಾಗೂ ಬ್ಯೂಟಿ ಎರಡನ್ನೂ ಚೆನ್ನಾಗಿ ಕಾಪಾಡಿಕೊಂಡಿದ್ದಾಳೆ. ಬಹುಶಃ ಇದಕ್ಕಾಗಿ ಬಗೆಬಗೆಯ ಕ್ರೀಮ್, ಬ್ಯೂಟಿ ಟ್ರೀಟ್ಮೆಂಟ್ ಮಾಡಿಸಿಕೊಳ್ತಿದ್ದಾಳೆ ಅನ್ನೋ ಭಾವನೆ ಎಲ್ಲರಲ್ಲೂ ಇದೆ. ಆದ್ರೆ ಚರ್ಮ ಮತ್ತು ಕೂದಲಿನ ಸೌಂದರ್ಯ ಕಾಪಾಡಿಕೊಳ್ಳಲು ಸಿಂಪಲ್ ಟೆಕ್ನಿಕ್ ಅಳವಡಿಸಿಕೊಂಡಿದ್ದಾರೆ.
ಚರ್ಮ ಸುಕ್ಕಾಗಿ ಸಡಿಲವಾಗದಂತೆ ಕಾಪಾಡಿಕೊಳ್ಳಲು ಪ್ರತಿ ದಿನ ಬೆಳಗ್ಗೆ ತಪ್ಪದೇ ಐಸ್ ಕೋಲ್ಡ್ ಫೇಶಿಯಲ್ ಮಾಡ್ತಾರೆ. ಬೌಲ್ ಒಂದರಲ್ಲಿ ಐಸ್ ತುಂಬಿಸಿ ಮೂರು ಬಾರಿ ಅದರಲ್ಲಿ ಮುಖವನ್ನು ಅದ್ದಿಸಿ ತೆಗೆಯುತ್ತಾರೆ. ಹೀಗೆ ಮಾಡೋದ್ರಿಂದ ಚರ್ಮ ಹೊಳಪು ಪಡೆಯುತ್ತದೆ.
ನೀವು ಕೂಡ ಪ್ರತಿದಿನ ಬೆಳಗ್ಗೆ 10 ಸೆಕೆಂಡ್ ಗಳ ಕಾಲ ಇದನ್ನು ಮಾಡಿದ್ರೆ, ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಅನ್ನೋದು ಕತ್ರೀನಾ ಸಲಹೆ. ಈ ರೀತಿ ಮಾಡೋದ್ರಿಂದ ಮುಖದಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ. ಮುಖ ಸುಕ್ಕಾಗುವುದಿಲ್ಲ.