ದೇಶದಾದ್ಯಂತ ನಟಿ ಕಂಗನಾ ಬಗ್ಗೆ ಬಿಸಿಬಿಸಿ ಚರ್ಚೆಯಾಗ್ತಿದೆ. ಕೆಲವರು ಕಂಗನಾ ಬೆಂಬಲಕ್ಕೆ ಬಂದ್ರೆ ಮತ್ತೆ ಕೆಲವರು ಕಂಗನಾ ಕೆಲಸವನ್ನು ವಿರೋಧಿಸಿದ್ದಾರೆ. ಈ ಮಧ್ಯೆ ಗುಜರಾತಿನ ವ್ಯಾಪಾರಿಯೊಬ್ಬರು ಕಂಗನಾ ಬೆಂಬಲಕ್ಕೆ ನಿಂತು ಅವ್ರ ಹೆಸರಿನಲ್ಲಿ ಸೀರೆ ಸಿದ್ಧಪಡಿಸುತ್ತಿದ್ದಾರೆ.
ವ್ಯಾಪಾರಿ ರತನ್, ಕಂಗನಾ ಹೆಸರಿನಲ್ಲಿ ಸೀರೆ ಸಿದ್ಧಪಡಿಸುತ್ತಿದ್ದಾರೆ. ಸೀರೆ ಮೇಲೆ ಕಂಗನಾ ಫೋಟೋ ಇದೆ. ಜೊತೆಗೆ ಕಂಗನಾ ಸಮರ್ಥನೆಯ ವಾಕ್ಯವಿದೆ. ಝಾನ್ಸಿ ರಾಣಿ. ಮಣಿಕರ್ಣಿಕಾ. ಕಂಗನಾ ನಾನು ನಿಮಗೆ ನಮಸ್ಕರಿಸುತ್ತೇವೆಂದು ಬರೆಯಲಾಗಿದೆ.
ಕಂಗನಾ ಧೈರ್ಯಕ್ಕೆ ಮೆಚ್ಚಬೇಕು. ಕಂಗನಾ ಪ್ರಶ್ನೆ ಮಾಡಿರುವುದ್ರಲ್ಲಿ ಯಾವುದೇ ತಪ್ಪಿಲ್ಲವೆಂದು ರತನ್ ಹೇಳಿದ್ದಾರೆ. ಕಂಗನಾ ಫೋಟೋ ಇರುವ ಈ ಸೀರೆಗೆ ಕಂಗನಾ ರೌತಲ್ ಫೆಬ್ರಿಕ್ ಸಾರಿ ಎಂದು ಹೆಸರಿಡಲಾಗಿದೆ. ಈ ಸೀರೆ ಬೆಲೆ 1 ಸಾವಿರ ರೂಪಾಯಿಯಿಂದ ಶುರುವಾಗುತ್ತದೆ. ಕಂಗನಾ ವಿರುದ್ಧ ನಡೆಯುತ್ತಿರುವ ಕ್ರಮ ಸರಿಯಲ್ಲವೆಂದು ರತನ್ ಹೇಳಿದ್ದಾರೆ.
ಕಂಗನಾ ಹಾಗೂ ಶಿವಸೇನೆ ಮಧ್ಯೆ ಮಾತಿನ ಯುದ್ಧ ಮುಂದುವರೆದಿದೆ.