ಸಂಜಯ್ ರೌತ್ ಮತ್ತು ಕಂಗನಾ ರಣಾವತ್ ನಡುವೆ ಪ್ರಾರಂಭವಾದ ವಿವಾದ ಈಗ ಕಂಗನಾ ಕಚೇರಿ ನೆಲಸಮವಾಗುವವರೆಗೆ ಬಂದು ನಿಂತಿದೆ. ಕಂಗನಾ ಅಕ್ರಮವಾಗಿ ಕಚೇರಿ ನಿರ್ಮಾಣ ಮಾಡಿದ್ದಾರೆನ್ನುವ ಕಾರಣಕ್ಕೆ ಬಿಎಂಸಿ ನೊಟೀಸ್ ನೀಡಿತ್ತು. ಈಗ ಕಟ್ಟಡ ನೆಲಸಮ ಕಾರ್ಯ ಶುರುವಾಗಿದೆ,.
ಬಾಲಿವುಡ್ ನಟಿ ಕಂಗನಾ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಬಿಎಂಸಿಯನ್ನು ಬಾಬರ್ ಸೈನ್ಯಕ್ಕೆ ಹೋಲಿಸಿದ್ದಾರೆ. ತಮ್ಮ ಕಚೇರಿಯನ್ನು ದೇವಾಲಯ ಎಂದು ಬಣ್ಣಿಸಿದ್ದಾರೆ. ಕಂಗನಾ ಜನವರಿಯಲ್ಲಿ 48 ಕೋಟಿ ವೆಚ್ಚದಲ್ಲಿ ಕಚೇರಿ ನಿರ್ಮಾಣ ಮಾಡಿದ್ದರು. ನಿನ್ನೆ ನೊಟೀಸ್ ನೀಡಿದ್ದ ಬಿಎಂಸಿ ನೊಟೀಸ್ ಗೆ ಉತ್ತರ ನೀಡಲು ಒಂದು ದಿನಗಳ ಕಾಲಾವಕಾಶ ನೀಡಿತ್ತು. 24 ಗಂಟೆಗಳ ನಂತರ ಬಿಎಂಸಿ ಕಚೇರಿ ನೆಲಸಮ ಕಾರ್ಯಾಚರಣೆ ಶುರು ಮಾಡಿದೆ.
ನನ್ನ ಕಚೇರಿ ನನಗೆ ರಾಮ ಮಂದಿರದಂತೆ. ಅಲ್ಲಿಗೆ ಇಂದು ಬಾಬರ್ ಬಂದಿದ್ದಾನೆ. ಇತಿಹಾಸ ಪುನರಾವರ್ತನೆಯಾಗ್ತಿದೆ. ರಾಮ ಮಂದಿರ ಮತ್ತೆ ನಿರ್ಮಾಣವಾಗಲಿದೆ. ಜೈ ಶ್ರೀ ರಾಮ್, ಜೈ ಶ್ರೀ ರಾಮ್, ಜೈ ಶ್ರೀ ರಾಮ್ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.