ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಪುತ್ರಿ ಐರಾಗೆ ಇಂದು ಎರಡನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನಟ-ನಟಿಯರು, ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ.
ತನ್ನ ಕ್ಯೂಟ್ ಮಾತು, ನಗು, ಚೇಷ್ಠೆಯಿಂದ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುವ ಐರಾ ಅಭಿಮಾನಿಗಳಿಗೂ ಅಚ್ಚುಮೆಚ್ಚು. ತಮ್ಮ ಮುದ್ದು ಮಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ವಿಶೇಷವಾಗಿ ಶುಭ ಕೋರಿರುವ ರಾಧಿಕಾ ಪಂಡಿತ್, ನೀನು ನಮ್ಮ ಜೀವನದಲ್ಲಿ ಖುಷಿಯನ್ನು ಬಿಟ್ಟು ಬೇರೇನೂ ನೀಡಿಲ್ಲ. ಹ್ಯಾಪಿ ಬರ್ತ್ ಡೇ ನಮ್ಮ ಪುಟ್ಟ ದೇವತೆ…..ಇಷ್ಟು ಬೇಗ ಬೆಳೆಯಬೇಡ ಎಂದು ಬರೆದುಕೊಂಡಿದ್ದಾರೆ.
https://www.instagram.com/p/CIQ_EJigQ1l/?utm_source=ig_web_copy_link