ಇತ್ತೀಚೆಗಷ್ಟೇ ‘ಪೆಟ್ರೋಮ್ಯಾಕ್ಸ್’ ಸಿನಿಮಾ ಚಿತ್ರೀಕರಣವನ್ನು ಮುಗಿಸಿದ ಸಂತಸವನ್ನು ಹಂಚಿಕೊಂಡಿದ್ದ ನಟಿ ಕಾರುಣ್ಯ ರಾಮ್ ಇಂದು ಸಂಕ್ರಾಂತಿ ಹಬ್ಬಕ್ಕೆ ಶುಭಾಶಯ ಕೋರಿರುವ ತಮ್ಮ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹೊಸ ವರ್ಷದಲ್ಲಿ ಮೊದಲು ಬರುವುದೇ ಸಂಕ್ರಾಂತಿ ಹಬ್ಬ. ನಿಮ್ಮೆಲ್ಲರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಎಳ್ಳು – ಬೆಲ್ಲ ತಿಂದು ಒಳ್ಳೆ ಮಾತಾಡಿ ಎಂದು ಹೇಳಿದ್ದಾರೆ.
ಈ ಮಕರ ಸಂಕ್ರಾಂತಿ ನಿಮ್ಮ ಬದುಕಿನಲ್ಲಿ ಸುಖ, ಶಾಂತಿ, ಉತ್ತಮ ಆರೋಗ್ಯ, ಸಂತೋಷವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. ತಮಗೂ ಮತ್ತು ತಮ್ಮ ಕುಟುಂಬದವರಿಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಎಳ್ಳು – ಬೆಲ್ಲ ತಿಂದು ಒಳ್ಳೆ ಮಾತಾಡಿ ಎಂದು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
https://www.instagram.com/p/CKBYjUNjcJ4/?utm_source=ig_web_copy_link