alex Certify ಎರಡು ಕಿಮೋಥೆರಫಿ ನಂತ್ರ ಇಳಿದಿದೆ ಸಂಜಯ್ ದತ್ ತೂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ಕಿಮೋಥೆರಫಿ ನಂತ್ರ ಇಳಿದಿದೆ ಸಂಜಯ್ ದತ್ ತೂಕ

ಬಾಲಿವುಡ್ ನಟ ಸಂಜಯ್ ದತ್ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ನೋವಿನ ಮಧ್ಯೆಯೂ ಕುಟುಂಬದ ಸಂತೋಷಕ್ಕಾಗಿ ಅವರು ನಗ್ತಿದ್ದಾರೆ. ಕುಟುಂಬದ ಜೊತೆ ಅಮೂಲ್ಯ ಸಮಯವನ್ನು ಕಳೆಯುತ್ತಿದ್ದಾರೆ. ಸದ್ಯ ಸಂಜಯ್ ದತ್ ದುಬೈನಲ್ಲಿದ್ದಾರೆ. ಶೀಘ್ರವೇ ಮುಂಬೈಗೆ ಬರಲಿದ್ದಾರೆ ಎನ್ನಲಾಗಿದೆ. ಅವ್ರ ಮೂರನೇ ಹಂತದ ಕಿಮೋಥೆರಪಿ ಶೀಘ್ರದಲ್ಲಿಯೇ ನಡೆಯಬೇಕಿದೆ.

ಸಂಜಯ್ ದತ್ ಪತ್ನಿ ಮಾನ್ಯತಾ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಂಡಿದ್ದಾರೆ. ಫೋಟೋವನ್ನು ಸೂಕ್ಷ್ಮವಾಗಿ ನೋಡಿದ್ರೆ ಸಂಜಯ್ ದತ್ ಬದಲಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಸಂಜಯ್ ದತ್ ತೂಕ ಕಡಿಮೆಯಾಗಿರುವುದನ್ನು ನೋಡಬಹುದು.

ಮಾನ್ಯತಾ, ಫೋಟೋಕ್ಕೆ ರೋಮ್ಯಾಂಟಿಕ್ ಶೀರ್ಷಿಕೆ ಕೂಡ ನೀಡಿದ್ದರು. ಈ ಫೋಟೋ ಕೆಲವೇ ಕ್ಷಣದಲ್ಲಿ ವೈರಲ್ ಆಗಿತ್ತು. 70 ಸಾವಿರಕ್ಕೂ ಹೆಚ್ಚು ಲೈಕ್ ಸಿಕ್ಕಿತ್ತು. ಸಂಜಯ್ ದತ್ ಗೆ ಮಕ್ಕಳ ನೆನಪಾಗಿತ್ತು ಎನ್ನಲಾಗಿದೆ. ಹಾಗಾಗಿ ಮಕ್ಕಳನ್ನು ನೋಡಲು ದುಬೈಗೆ ತೆರಳಿದ್ದಾರೆ. ಲೀಲಾವತಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗ್ತಿದೆ. ಚಿಕಿತ್ಸೆ ಮಧ್ಯೆಯೂ ಸಂಜಯ್ ಶೂಟಿಂಗ್ ಬಿಟ್ಟಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...