ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ವಿಚಾರಣೆ ವೇಳೆ ಹೊರಬಿದ್ದ ಡ್ರಗ್ಸ್ ಪ್ರಕರಣ ಈಗ ಬಾಲಿವುಡ್ ನ ದಿಗ್ಗಜರನ್ನು ಎನ್.ಸಿ.ಬಿ. ಮುಂದೆ ತಂದು ನಿಲ್ಲಿಸುತ್ತಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಎನ್.ಸಿ.ಬಿ. ವಿಚಾರಣೆಗೊಳಗಾಗಿದ್ದಾರೆ. ಎನ್.ಸಿ.ಬಿ. ಗೆಸ್ಟ್ ಹೌಸ್ ನಲ್ಲಿ ದೀಪಿಕಾ ವಿಚಾರಣೆ ನಡೆಯುತ್ತಿದೆ.
ಎನ್.ಸಿ.ಬಿ.ಮುಂದೆ ಕರಿಷ್ಮಾ ಅನೇಕ ವಿಷ್ಯಗಳನ್ನು ಹೇಳಿದ್ದರು ಎನ್ನಲಾಗಿದೆ. ಇದ್ರ ಬಗ್ಗೆ ದೀಪಿಕಾರಿಂದ ಎನ್.ಸಿ.ಬಿ. ಮಾಹಿತಿ ಪಡೆಯಲಿದೆ. ದೀಪಿಕಾ ವಿಚಾರಣೆ ನಡೆಯುತ್ತಿರುವ ಸ್ಥಳದಲ್ಲಿ ಮುಂಬೈ ಪೊಲೀಸರು ಉಪಸ್ಥಿತರಿದ್ದಾರೆ ಎನ್ನಲಾಗಿದೆ.
ರಾತ್ರಿ ದೀಪಿಕಾ ಮನೆಯಲ್ಲಿರಲಿಲ್ಲ ಎನ್ನಲಾಗಿದೆ. ದೀಪಿಕಾ ಹಾಗೂ ರಣವೀರ್ ಸಿಂಗ್ ಫೈವ್ ಸ್ಟಾರ್ ಹೊಟೇಲ್ ನಲ್ಲಿದ್ದರು ಎನ್ನಲಾಗಿದೆ. ರಾತ್ರಿ ಹಿರಿಯ ವಕೀಲರ ಜೊತೆ ಮಾತುಕತೆ ನಡೆಸಿದ್ದಾರೆ. ನಂತ್ರ ಬೆಳಿಗ್ಗೆ 10 ಗಂಟೆಗೆ ಎನ್.ಸಿ.ಬಿ. ಕಚೇರಿಗೆ ದೀಪಿಕಾ ತಲುಪಿದ್ದರು. ಇಂದೇ ನಟಿಯರಾದ ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ವಿಚಾರಣೆ ನಡೆಯಲಿದೆ.