
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ನವರಸ ನಾಯಕ ಜಗ್ಗೇಶ್, ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸದಾ ತಮ್ಮದೇ ಶೈಲಿಯಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡುವ ನಟ ಜಗ್ಗೇಶ್ ಡ್ರಗ್ಸ್ ಮಾಫಿಯಾ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್, ಸರಿಯಾಗಿ ಬಾಳಿ ಬದುಕುವ ನಿರ್ಧಾರ ಮಾಡಿ ಶ್ರಮಿಸುವರು ಎಲ್ಲೆ ಇದ್ದರು ಶ್ರೇಷ್ಠವಾಗಿ ಉಳಿಯುತ್ತಾರೆ! ನಾನು ನನ್ನಿಷ್ಟ! ನನ್ನ ಬದುಕು ಎನ್ನುವರ ಮಠಕ್ಕೆ ಸೇರಿಸಿದರು. ನಶೆ ಹಾದರದ ಬಿಸಿ ಹೆಂಚಿನಮೇಲೆ ಸ್ವಲ್ಪ ಕಾಲ ಬದುಕಿ ವಿಕೃತ ಆನಂದ ಅನುಭವಿಸಿ ಸೀದುಹೋಗುತ್ತಾರೆ! ಏಕ್ ಮಾರ್ ದೋ ತುಕಡ
ತಪ್ಪುಮಾಡಿದವರ ಬೆತ್ತಲೆ ಮಾಡಿ! ಆಗಲಾದರೂ ಜನಕ್ಕೆ ಅರಿವಾಗಲಿ!
ಬಲವಂತಕ್ಕೆ 2017 ಒಬ್ಬ ರಾಜಕಾರಣಿ ಪಾರ್ಟಿಗೆ ಹೋಗಿದ್ದೆ! ಅರ್ಧಘಂಟೆಗೆ ಆ ಜಾಗ ಅಲ್ಲಿದ್ದವರ ಆರ್ಭಟ! ಬಂದು ಸೇರಿದ ಅರ್ಧ ಉಡುಗೆ ಸುಂದರಿಯರು! ಅದಕಂಡು ನಾನು ನನ್ನ ಆತ್ಮೀಯ ಯುವನಟ ಹೇಳದೆ ಕೇಳದೆ ಲಿಫ್ಟು ಬಳಸದೆ 12 ಮಹಡಿ ಇಳಿದು ಓಡಿದೆವು! ಅದೇ ಕಡೆ ಇಂದಿಗೂ ನನಗೆ ಯಾರೂ ಕರೆ ಮಾಡದಂತೆ ಮೊಬೈಲ್ ವರ್ಜಿಸಿದೆ!
ಅಲ್ಲಿದ್ದವರು ಸಮಾಜದ ಎಲ್ಲ ಮುಖಗಳು!
ಶ್ರೇಷ್ಠ ಮನುಜನ್ಮ! ಅದುನಶ್ವರ ಸತ್ಯ! ಆದರೂ ಆ ನಶ್ವರ ದೇಹ ನಶಿಸುವ ಮುನ್ನ ಸಾರ್ಥಕಪಡಿಸಿ ಬದುಕಬೇಕು! ನಶೆ ಹಾದರದ ಹಿಂದೆ ಬರಿ ಸಿನಿಮ ಅಲ್ಲಾ ಸಮಾಜವೆ ಆಕರ್ಷಶಿತ ಆಗುತ್ತಿದೆ! ಯಾರು ಶ್ರಮಪಟ್ಟು ಜೀವನ ಗೆದ್ದಿರುತ್ತಾರೆ ಅವರ ಹೆಜ್ಜೆ ತಪ್ಪುದಾರಿ ತುಳಿಯದು! ಯಾರು ವಾಮಮಾರ್ಗದಲ್ಲಿ ಗೆದ್ದಿರುತ್ತಾರೆ ಅವರೆ ನಶೆಹಾದರದ ದಾಸರು! ಉಪ್ಪುತಿಂದವ ನೀರುಕುಡಿಯುವ! ಎಂದು ಕಿಡಿಕಾರಿದ್ದಾರೆ.