alex Certify ಉದ್ಯೋಗ ಕಳೆದುಕೊಂಡವರಿಗೆ ಇ-ರಿಕ್ಷಾ ನೀಡಿದ ಬಾಲಿವುಡ್ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗ ಕಳೆದುಕೊಂಡವರಿಗೆ ಇ-ರಿಕ್ಷಾ ನೀಡಿದ ಬಾಲಿವುಡ್ ನಟ

ಮುಂಬೈ: ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾಗಿದ್ದ ಸಾವಿರಾರು ಜನರಿಗೆ ಸಹಾಯ ಮಾಡಿದ್ದ ಬಾಲಿವುಡ್ ನಟ ಸೋನು ಸೂದ್ ಇದೀಗ ಮತ್ತೊಂದು ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ.

ಕೊರೊನಾದಿಂದಾಗಿ ಕೆಲಸ ಕಳೆದುಕೊಂಡವರಿಗೆ ಇ-ರಿಕ್ಷಾ ನೀಡುವ ಮೂಲಕ ಮತ್ತೊಮ್ಮೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಸೋನು ಸೂದ್, ’ಖುದ್ ಕಾಮಾವ್, ಘರ್ ಚಲಾವ್’ ಎಂದು ಹೇಳುವ ಮೂಲಕ ಸ್ವತಃ ಸಂಪಾದಿಸಿ, ಕುಟುಂಬ ನಿರ್ವಹಿಸಿ ಎಂದಿದ್ದಾರೆ.

ಜನರಿಗೆ ಅಗತ್ಯ ವಸ್ತುಗಳನ್ನು ಹಂಚುವ ಬದಲು ಅವರಿಗೆ ಉದ್ಯೋಗ ನೀಡುವುದು ಇನ್ನೂ ಉತ್ತಮ. ಹಾಗಾಗಿ ಇ-ರಿಕ್ಷಾಗಳನ್ನು ಕೊಡುಗೆಯಾಗಿ ನೀಡುತ್ತಿದ್ದೇನೆ. ಜನರಿಂದ ಸಿಕ್ಕಿರುವ ಪ್ರೀತಿ ವಿಶ್ವಾಸವೇ ನನಗೆ ಸಮಾಜಮುಖಿ ಕೆಲಸ ಮಾಡಲು ಪ್ರೇರಣೆಯಾಗಿದೆ ಎಂದು ಸೋನು ಸೂದ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...