![](https://kannadadunia.com/wp-content/uploads/2020/10/d4e6c313-fd03-4e23-9183-133957414bed.jpg)
ಕೊರೋನಾ ಆವರಿಸಿ ಎಲ್ಲರೂ ಮನೆಯಲ್ಲೇ ಬಂಧಿಯಾದ ಅವಧಿಯಲ್ಲಿ ಹಲವು ನಟಿಯರು ತಮ್ಮ ಸೌಂದರ್ಯದ ಗುಟ್ಟುಗಳನ್ನು ಬಿಚ್ಚಿಟ್ಟಿದ್ದಾರೆ. ಅವುಗಳ ಬಗ್ಗೆ ತಿಳಿಯೋಣ ಬನ್ನಿ.
ಮಗಧೀರ ಚಿತ್ರದಲ್ಲಿ ಮಿಂಚಿ ಎಲ್ಲರ ನೆಚ್ಚಿನ ನಟಿಯಾದ ತಮನ್ನಾ ತನ್ನ ಉದ್ದನೆಯ ಕೂದಲಿಗೆ ಈರುಳ್ಳಿ ರಸ ಮತ್ತು ಕೊಬ್ಬರಿ ಎಣ್ಣೆಯನ್ನು ಮಾತ್ರ ಬಳಸುವುದಾಗಿ ಹೇಳಿಕೊಂಡಿದ್ದಾರೆ. ಈರುಳ್ಳಿ ರಸದ ವಾಸನೆ ತಡೆದುಕೊಳ್ಳುವುದು ಕೊಂಚ ಕಷ್ಟವಾದರೂ ಕೂದಲಿನ ವಿಷಯದಲ್ಲಿ ಅದು ಜಾದೂ ಮಾಡುತ್ತದೆ ಎಂದಿದ್ದಾರೆ.
ಅನನ್ಯಾ ಪಾಂಡೆ ತಮ್ಮ ತಾಯಿ ಬಳಸುತ್ತಿದ್ದ ಫೇಸ್ ಮಾಸ್ಕ್ ಅನ್ನೇ ಇಂದಿಗೂ ಬಳಸುತ್ತಿದ್ದಾರಂತೆ. ಇದರ ತಯಾರಿಗೆ ಮೊಸರು, ಅರಿಶಿನ ಮತ್ತು ಜೇನುತುಪ್ಪ ಸೇರಿಸುತ್ತಾರೆ ಅನನ್ಯಾ. ಈ ಮಿಶ್ರಣ ಕಲೆ, ಮೊಡವೆಗಳನ್ನು ದೂರಮಾಡಿ ತ್ವಚೆಯ ಹೊಳಪಿಗೆ ಕಾರಣವಾಗುತ್ತದಂತೆ.
ಪ್ರಿಯಾಂಕಾ ಚೋಪ್ರಾ ತಮ್ಮ ಕೂದಲು ದಟ್ಟವಾಗಿ ಬೆಳೆಯಲು ಜೇನುತುಪ್ಪ ಮತ್ತು ಮೊಟ್ಟೆಯ ಹೇರ್ ಮಾಸ್ಕ್ ಬಳಸುತ್ತಾರಂತೆ. ಇದು ಒಣಗಿದ ಸಿಕ್ಕು ಕೂದಲಿನ ಸಮಸ್ಯೆಯನ್ನೂ ದೂರಮಾಡುತ್ತದೆ. ಮಲೈಕಾ ಅರೋರಾ ಮೊಡವೆಯ ಕಲೆಗಳನ್ನು ಹೋಗಲಾಡಿಸಲು ಅಲೋವೇರಾ ಬಳಸುತ್ತಾರಂತೆ.