ಬಾಲಿವುಡ್, ಟಾಲಿವುಡ್ ನಟಿಯರು ತಮ್ಮ ಅಭಿಮಾನಿಗಳನ್ನು ರಂಜಿಸಲು ಆಗಾಗ ಸುದ್ದಿಯಲ್ಲಿರುತ್ತಾರೆ. ಈಗ ಸಮಂತಾ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಯಾಕೆ ಎಂಬುದು ಇಲ್ಲಿದೆ ಓದಿ.
ತಮಿಳು – ತೆಲುಗು ಚಿತ್ರಗಳಲ್ಲಿ ನಟಿಸಿರುವ ಸಮಂತಾಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಫ್ಯಾಶನ್ ಲೋಕದಲ್ಲೂ ಮಿಂಚುತ್ತಿರುವ ಸಮಂತಾ, ಅಕ್ಕಿನೇನಿ ಕುಟುಂಬದ ಸೊಸೆಯಾದ ಬಳಿಕವೂ ಮತ್ತಷ್ಟು ಹಾಟ್ ಲುಕ್ ನಿಂದ ಗಮನ ಸೆಳೆಯುತ್ತಿದ್ದಾರೆ.
ಈಗ ಮತ್ತೆ ಹಚ್ಚೆ ಹಾಕಿಸಿಕೊಂಡರೇ ಎಂದು ಹುಬ್ಬೇರಿಸದಿರಿ. ಈಗಾಗಲೇ ಕಿವಿಯಲ್ಲಿ ನಾಲ್ಕು ಓಲೆಗಳಿಗೆ ತಕ್ಕನಷ್ಟು ಚುಚ್ಚಿಸಿಕೊಂಡಿರುವ ಸಮಂತಾ, ಇದೀಗ ಐದನೇ ತೂತು ಮಾಡಿಕೊಂಡಿದ್ದಾರೆ. ಈ ಮೂಲಕ ಕಿವಿಯಲ್ಲಿ ಮತ್ತಷ್ಟು ಬಂಗಾರವನ್ನು ಸಿಕ್ಕಿಸಿಕೊಳ್ಳುವ ಅವಕಾಶ ಪಡೆದಿದ್ದಾರೆ.
ಇದೇ ರೀತಿ ಕಿವಿ ತುಂಬಾ ಚುಚ್ಚಿಸಿಕೊಂಡು ಓಲೆ ಹಾಕಿಕೊಳ್ಳುವ ಪರಿಪಾಠ ಕೆಲವು ವರ್ಷಗಳ ಹಿಂದೆ ಚಾಲ್ತಿಯಲ್ಲಿತ್ತು. ಸಮಂತಾರ ಈ ಸ್ಟೈಲ್ ಫ್ಯಾಶನ್ ಲೋಕದಲ್ಲಿ ಈ ಹೊಸ ಟ್ರೆಂಡ್ ಸೃಷ್ಟಿಸುವ ನಿರೀಕ್ಷೆ ಇದೆ.
ಸದಾ ಮಾಡರ್ನ್ ಡ್ರೆಸ್ ಧರಿಸಿ ಆಕರ್ಷಕವಾಗಿ ಕಾಣುವ ನಟಿ ಸಮಂತಾ ಅತ್ಯುತ್ತಮ ನಟಿಯೂ ಹೌದು. ತಮಿಳು, ತೆಲುಗು ಭಾಷೆಯ ಮೇರು ನಟರೊಂದಿಗೆ ನಟಿಸಿದ ಕೀರ್ತಿಯೂ ಅವರದ್ದಾಗಿದೆ. ಸಮಂತಾ ಟ್ಯಾಟೋ ಪ್ರಿಯೆ. ಬೆನ್ನಿನ ಮೇಲೆ ಅವರು ಮೂಡಿಸಿಕೊಂಡಿದ್ದ ಟ್ಯಾಟೊ ಭಾರೀ ಟ್ರೆಂಡ್ ಸೃಷ್ಟಿಸಿತ್ತು.