alex Certify ಇಲ್ಲಿದೆ ಕರೀನಾ ‘ಬ್ಯೂಟಿ’ ಸೀಕ್ರೆಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಕರೀನಾ ‘ಬ್ಯೂಟಿ’ ಸೀಕ್ರೆಟ್

ಕೊರೊನಾ ಕಾರಣದಿಂದ ಮನೆಯಲ್ಲೇ ಉಳಿಯಬೇಕಾಗಿ ಬಂದಾಗ ಬಾಲಿವುಡ್ ನ ಸಖತ್ ಬೇಡಿಕೆಯ ನಟಿ ಕರಿನಾ ಕಪೂರ್ ತಮ್ಮ ಸೌಂದರ್ಯದ ರಹಸ್ಯವನ್ನು ಬಿಚ್ಚಿಟ್ಟಿದ್ದರು. ಮನೆಯಲ್ಲೇ ಮಾಡಬಹುದಾದ ಕೆಲವು ಸೌಂದರ್ಯ ಟಿಪ್ಸ್ ಗಳನ್ನು ನೀಡಿದ್ದರು. ಅವು ಇಲ್ಲಿವೆ ನೋಡಿ.

ಕರೀನಾ ತಮ್ಮ ಕೂದಲಿಗೆ ಹಾಗೂ ತ್ವಚೆಗೆ ಬಾದಾಮಿ ಎಣ್ಣೆ ಬಳಸುತ್ತಾರೆ. ಇದರಿಂದಲೇ ತಲೆಗೆ ಮಸಾಜ್ ಮಾಡಿಕೊಳ್ಳುತ್ತಾರೆ. ತನ್ನ ತಾಯಿ ಮತ್ತು ಅಜ್ಜಿಯೂ ಇದೇ ವಿಧಾನ ಅನುಸರಿಸುತ್ತಿದ್ದರು ಎನ್ನುತ್ತಾರೆ ಕರೀನಾ.

ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದರಿಂದ ತ್ವಚೆ ಕ್ಲೀನ್ ಆಗಿರುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣ ವಯಸ್ಸಾದ ಲಕ್ಷಣಗಳನ್ನು ಮರೆಮಾಚುತ್ತದೆ. ತ್ವಚೆ ನಯವಾಗುವುದಕ್ಕೆ ಜೇನುತುಪ್ಪದಿಂದ ಮಸಾಜ್ ಮಾಡಿಕೊಳ್ಳುತ್ತಾರೆ.

ಕರೀನಾ ಎಲ್ಲಾ ನಟಿಯರಂತೆ ಸಾಕಷ್ಟು ನೀರು ಕುಡಿಯುವುದನ್ನು ಮಾತ್ರ ತಪ್ಪಿಸಿಕೊಳ್ಳುವುದಿಲ್ಲ. ದೇಹವನ್ನು ಹೈಡ್ರೇಟ್ ಮಾಡಲು ಸಾಕಷ್ಟು ನೀರು ಕುಡಿಯುತ್ತಾರೆ. ಇದರಿಂದ ತ್ವಚೆಯ ಹಾಗೂ ಕೂದಲಿನ ಆರೈಕೆ ಸಾಧ್ಯ ಎಂಬುದನ್ನು ದೃಢವಾಗಿ ನಂಬಿಕೊಂಡಿದ್ದಾರೆ.

ನೈಸರ್ಗಿಕ ಫೇಸ್ ಪ್ಯಾಕ್ ಮಾಡಿಕೊಳ್ಳುವ ಕರೀನಾ ಮೊಸರು ಮತ್ತು ಬಾದಾಮಿ ಎಣ್ಣೆಯನ್ನು ಬಳಸಿಕೊಳ್ಳುತ್ತಾರೆ. ಮೊಸರು ನೈಸರ್ಗಿಕ ಬ್ಲೀಚಿಂಗ್ ಗುಣ ಹೊಂದಿದ್ದು ಸತ್ತ ಜೀವಕೋಶಗಳನ್ನು ತೆಗೆದು ಹಾಕುತ್ತವೆ. ಮೊಡವೆಯನ್ನೂ ದೂರವಿಡುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...