ಬಾಲಿವುಡ್ ಬೆಡಗಿ ಕರಿಷ್ಮಾ ಕಂಡರೆ ಯಾರಿಗಿಷ್ಟವಿಲ್ಲ ಹೇಳಿ? ಮುದ್ದು ಮುಖದ ಈ ಸುಂದರಿ ಇಂದಿಗೂ ಅದೇ ಆಕರ್ಷಕ ತ್ವಚೆ ಹಾಗೂ ಸೌಂದರ್ಯವನ್ನು ಉಳಿಸಿಕೊಂಡಿದ್ದಾರೆ. ಕರಿಷ್ಮಾ ತಮ್ಮ ಬ್ಯೂಟಿ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
ನಾನು ಬೆಳಿಗ್ಗೆ ಬೇಗ ಏಳುತ್ತೇನೆ. ಎದ್ದಾಕ್ಷಣ ಖಾಲಿ ಹೊಟ್ಟೆಗೆ ಬಿಸಿ ಬಿಸಿ ನೀರು ಕುಡಿಯುತ್ತೇನೆ. ಬಳಿಕ ಯೋಗ ಮತ್ತಿತರ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೇನೆ ಎಂದಿದ್ದಾರೆ.
ಮುಖದ ಸೌಂದರ್ಯಕ್ಕೆ ಕಡಿಮೆ ಸಾಮಾಗ್ರಿಗಳನ್ನು ಬಳಸುವ ಕರಿಷ್ಮಾ ರಾತ್ರಿ ಮಲಗುವ ಮುನ್ನ ಮುಖ ತೊಳೆದು ತೈಲಭರಿತ ಸೀರಮ್ ಬಳಸುತ್ತಾರೆ. ಇದು ತ್ವಚೆಯನ್ನು ಮೃದುಗೊಳಿಸುತ್ತದೆ ಎನ್ನುತ್ತಾರವರು.
ದಿನವಿಡೀ ಮೇಕಪ್ ನಲ್ಲಿದ್ದು ಬಳಲುವ ಮುಖವನ್ನು ರಾತ್ರಿಯಿಡೀ ಸ್ವಚ್ಛವಾಗಿಡುವುದು ಮುಖ್ಯ. ಯಾವುದೇ ಕಾರಣಕ್ಕೆ ಮೇಕಪ್ ಇದ್ದಂತೆ ಮಲಗದಿರಿ ಎಂದು ಸಲಹೆ ನೀಡುತ್ತಾರೆ.
ಬಿಸಿಲಿಗೆ ಅಥವಾ ಮನೆಯಿಂದ ಹೊರಹೋಗುವ ಮುನ್ನ ಸನ್ ಸ್ಕ್ರೀನ್ ಹಾಗೂ ಸನ್ ಗ್ಲಾಸ್ ಬಳಸಿ. ಮಹಿಳೆಯರು ಯಾವುದೇ ಕಾರಣಕ್ಕೂ ಈ ಸಂಗತಿಯನ್ನು ಮರೆಯದಿರಿ. ಇದೇ ಕಾರಣದಿಂದ ತ್ವಚೆ ಹೊಳಪು ಕಳೆದುಕೊಳ್ಳುತ್ತದೆ ಎಂದು ಅನುಭವ ಹಂಚಿಕೊಂಡಿದ್ದಾರೆ.