alex Certify ನಾಗಚೈತನ್ಯರಿಂದ ದೂರವಾದ ನಟಿ ಸಮಂತಾ ಮತ್ತೊಂದು ಅಚ್ಚರಿ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಗಚೈತನ್ಯರಿಂದ ದೂರವಾದ ನಟಿ ಸಮಂತಾ ಮತ್ತೊಂದು ಅಚ್ಚರಿ ನಿರ್ಧಾರ

‘ಫ್ಯಾಮಿಲಿ ಮ್ಯಾನ್’​ ಖ್ಯಾತಿಯ ನಟಿ ಸಮಂತಾ ರುತ್​ ಪ್ರಭು ತಮ್ಮ ಮಾಜಿ ಪತಿ ನಾಗಚೈತನ್ಯರಿಗೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಿಂದ ಕೊಕ್​ ನೀಡಿದ್ದಾರೆ. ಹೌದು..! ನಟಿ ಸಮಂತಾ ನಾಗಚೈತನ್ಯರನ್ನು ಇನ್​ಸ್ಟಾದಲ್ಲಿ ಅನ್​ಫಾಲೋ ಮಾಡಿದ್ದಾರೆ.

400 ಕ್ಕೂ ಅಧಿಕ ಖಾತೆಗಳನ್ನು ಇನ್​​ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿರುವ ನಟಿ ಸಮಂತಾ ಈಗಾಗಲೇ ನಾಗಚೈತನ್ಯ ಜೊತೆಗಿದ್ದ ಎಲ್ಲಾ ಫೋಟೋಗಳನ್ನು ಪ್ರೊಫೈಲ್​​​ನಿಂದ ಅಳಿಸಿ ಹಾಕಿದ್ದರು. ಇದೀಗ ನಾಗಚೈತನ್ಯರನ್ನು ಇನ್​ಸ್ಟಾಗ್ರಾಂನಲ್ಲಿ ಅನ್​ಫಾಲೋ ಮಾಡಿದ್ದಾರೆ.

‘ಮಜಿಲಿಯೇ ಮಾಯ ಚೇಸಾವೆ’ ಹಾಗೂ ‘ಆಟೋನಗರ ಸೂರ್ಯ’ ಮುಂತಾದ ಸಿನಿಮಾಗಳಲ್ಲಿ ಸಹನಟರಾಗಿ ನಟಿಸಿದ್ದ ಸಮಂತಾ ಹಾಗೂ ನಾಗಚೈತನ್ಯ 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕಳೆದ ವರ್ಷ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಅಕ್ಕಿನೇನಿ ಎಂಬ ಉಪನಾಮವನ್ನು ಅಳಿಸಿ ಹಾಕಿದ್ದರು. ಇದಾದ ಬಳಿಕ ಅನೇಕರು ಇವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿರಬಹುದು ಎಂದು ಶಂಕಿಸಿದ್ದರು. ಅದರಂತೆ, ಸಮಂತಾ ಹಾಗೂ ನಾಗಚೈತನ್ಯ ಜಂಟಿ ಹೇಳಿಕೆಯ ಮೂಲಕ ತಾವು ಬೇರ್ಪಡುವ ಬಗ್ಗೆ ಮಾಹಿತಿ ನೀಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...