alex Certify ಇನ್​ಸ್ಟಾ, ಟ್ವಿಟರ್​​ ನಲ್ಲಿ ಧನುಷ್​ ಹೆಸರನ್ನು ಅಳಿಸಿ ಹಾಕಿದ ರಜನಿಕಾಂತ್​ ಪುತ್ರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್​ಸ್ಟಾ, ಟ್ವಿಟರ್​​ ನಲ್ಲಿ ಧನುಷ್​ ಹೆಸರನ್ನು ಅಳಿಸಿ ಹಾಕಿದ ರಜನಿಕಾಂತ್​ ಪುತ್ರಿ..!

ವೈವಾಹಿಕ ಸಂಬಂಧ ಮುರಿದುಕೊಂಡ ಬಗ್ಗೆ ಘೋಷಣೆ ಮಾಡಿದ ಕೆಲವು ತಿಂಗಳುಗಳ ಬಳಿಕ ಬಳಿಕ ಇದೀಗ ಐಶ್ವರ್ಯಾ ರಜನಿಕಾಂತ್​ ತಮ್ಮ ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂನಲ್ಲಿ ಧನುಷ್​​ ಹೆಸರನ್ನು ಅಳಿಸಿ ಹಾಕಿದ್ದಾರೆ.

ಈ ಹಿಂದೆ ಸೋಶಿಯಲ್​ ಮೀಡಿಯಾಗಳಲ್ಲಿ ಅವರ ಹೆಸರು ಐಶ್ವರ್ಯಾ ರಜನಿಕಾಂತ್​ ಧನುಷ್​ ಎಂದಿತ್ತು. ಇದೀಗ ತಮ್ಮ ಹೆಸರಿನಿಂದ ಧನುಷ್​​​ ಎಂಬ ಹೆಸರನ್ನು ತೆಗೆದುಹಾಕುವ ಮೂಲಕ ಈ ಜೋಡಿ ಮತ್ತೆ ಒಂದಾಗುತ್ತದೆ ಎಂಬ ವದಂತಿಗಳನ್ನು ಅಳಿಸಿಹಾಕಿದಂತಾಗಿದೆ. ಜನವರಿ 17ರಂದು ವಿಚ್ಛೇದನದ ಬಗ್ಗೆ ಐಶ್ವರ್ಯಾ – ಧನುಷ್​ ಘೋಷಣೆ ಮಾಡಿದ್ದರು.

ಜನವರಿ 17ರಂದು ಧನುಷ್​ ಹಾಗೂ ಐಶ್ವರ್ಯಾ ತಾವು ಬೇರ್ಪಡುತ್ತಿರುವುದರ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ಶಾಕ್​​ ಆಗಿದ್ದರು. ಧನುಷ್​ ತಂದೆ ಕಸ್ತೂರಿ ರಾಜ ಇದು ಕೇವಲ ಕುಟುಂಬದ ಜಗಳ ಎಂದು ಹೇಳಿದ್ದರು. ಇದಾದ ಬಳಿಕ ಈ ಜೋಡಿ ಮತ್ತೆ ಒಂದಾಗಬಹುದು ಎಂಬ ಊಹಾಪೋಹಗಳು ಹರಿದಾಡಿದ್ದವು. ಆದರೆ, ಈಗ ಇವೆಲ್ಲದಕ್ಕೂ ಐಶ್ವರ್ಯಾ ಫುಲ್​ ಸ್ಟಾಪ್​ ಇಟ್ಟಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...