ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ. ಹಣ ವರ್ಗಾವಣೆ ವಿಷ್ಯಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಇಂದು ಸುಶಾಂತ್ ಸಿಂಗ್ ಸಹೋದರಿ ಮೀತು ಸಿಂಗ್ ಇಡಿ ಕಚೇರಿ ತಲುಪಿದ್ದಾರೆ.
ಇಡಿ ಮುಂದೆ ಹಾಜರಾಗಿರುವ ರಜಪೂತ್ ಕುಟುಂಬದ ಮೊದಲ ಸದಸ್ಯೆ ಮೀತು ಸಿಂಗ್. ಮೀತು ಐದು ಬಾರಿ ಮುಂಬೈ ಪೊಲೀಸ್ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಆದ್ರೆ ಇಡಿ ಮುಂದೆ ಇದೇ ಮೊದಲ ಬಾರಿ ಹಾಜರಾಗಿದ್ದಾರೆ.
ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಹಣಕಾಸು ವ್ಯವಹಾರದ ಬಗ್ಗೆ ಸಹೋದರಿ ಮೀತು ಸಿಂಗ್ ಮಾಹಿತಿ ನೀಡ್ತಾರೆಂಬ ನಿರೀಕ್ಷೆ ಇಡಿ ಅಧಿಕಾರಿಗಳದ್ದು. ಸುಶಾಂತ್ ಸಿಂಗ್ ಬಾಗಿಲು ತೆರೆಯುತ್ತಿಲ್ಲ ಎನ್ನುವ ಕಾರಣಕ್ಕೆ ಅವ್ರ ರೂಮಿಗೆ ಹೋದ ಕೆಲವೇ ಕೆಲವು ಮಂದಿಯಲ್ಲಿ ಮೀತು ಸಿಂಗ್ ಕೂಡ ಒಬ್ಬರು.