ʼಚಿನ್ನಾರಿ ಮುತ್ತʼ ನಟ ವಿಜಯ್ ರಾಘವೇಂದ್ರ ಇಂದು ತಮ್ಮ 42ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿಜಯ್ ರಾಘವೇಂದ್ರ 1982ರಂದು ‘ಚಲಿಸುವ ಮೋಡಗಳು’ ಎಂಬ ಚಿತ್ರದಲ್ಲಿ ಬಾಲ ಕಲಾವಿದನಾಗಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು.
1993ರಂದು ‘ಚಿನ್ನಾರಿ ಮುತ್ತ’ ಸಿನಿಮಾದಲ್ಲಿ ಅಭಿನಯಿಸಿದ ನಂತರ ವಿಜಯ್ ರಾಘವೇಂದ್ರ ಸಾಕಷ್ಟು ಜನಪ್ರಿಯತೆ ಪಡೆದರು. ಈ ಚಿತ್ರದ ಮೂಲಕ ಅತ್ಯುತ್ತಮ ಬಾಲನಟ ಎಂಬ ರಾಜ್ಯಪ್ರಶಸ್ತಿಯನ್ನು ಪಡೆದರು.
1995ರಂದು ‘ಕೊಟ್ರೇಶಿ ಕನಸು’ ಎಂಬ ಚಿತ್ರದಲ್ಲಿ ನಟಿಸಿದರು. ಈ ಸಿನಿಮಾದಿಂದ ರಾಷ್ಟ್ರ ಪ್ರಶಸ್ತಿಯನ್ನು ಪಡೆದರು. ಬಾಲನಟನಾಗಿದ್ದಾಗಲೇ ಸಾಕಷ್ಟು ಹೆಸರು ಮಾಡಿದ್ದ ವಿಜಯ್ ರಾಘವೇಂದ್ರ 2002ರಂದು ಎಸ್. ಮಹೇಂದರ್ ನಿರ್ದೇಶನದ ‘ನಿನಗಾಗಿ’ ಚಿತ್ರದಲ್ಲಿ ನಾಯಕನಾಗಿ ನಟಿಸಿದರು.
ನಂತರ ಸಾಕಷ್ಟು ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದು ಈವರೆಗೆ 49 ಚಿತ್ರಗಳಲ್ಲಿ ನಟಿಸಿದ್ದಾರೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಕಲಾವಿದರಿಂದ ವಿಜಯ್ ರಾಘವೇಂದ್ರ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
https://www.instagram.com/p/CB91GsOgbQU/?utm_source=ig_web_copy_link
https://www.instagram.com/p/CGUqYxsg4S8/?utm_source=ig_web_copy_link
https://www.instagram.com/p/CGbjabiA8MO/?utm_source=ig_web_copy_link