![](https://kannadadunia.com/wp-content/uploads/2021/07/768-512-3432625-thumbnail-3x2-komal-2.jpg)
ನವರಸ ನಾಯಕ ಜಗ್ಗೇಶ್ ಅವರ ಸಹೋದರ ನಟ ಕೋಮಲ್ ಇಂದು ತಮ್ಮ 48ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟ ಕೋಮಲ್ ‘ಸೂಪರ್ ನನ್ ಮಗ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಸಿನಿಮಾರಂಗ ಪ್ರವೇಶಿಸಿದರು. ಆರಂಭದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡರು. ಬಳಿಕ ಹಾಸ್ಯ ಕಲಾವಿದನಾಗಿ ನಟಿಸಿ ಎಲ್ಲರ ಮನೆಮಾತಾದರು.
2008ರಂದು ದಿನೇಶ್ ಬಾಬು ನಿರ್ದೇಶನದ ‘ಮಿಸ್ಟರ್ ಗರಗಸ’ ಚಿತ್ರದಲ್ಲಿ ಮೊದಲ ಬಾರಿ ನಾಯಕನಾಗಿ ನಟಿಸಿದರು. ನಟ ಕೋಮಲ್ ಎಲ್ಲಾ ರೀತಿಯ ಪಾತ್ರದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಕೋಮಲ್ ಕುಮಾರ್ ತುಮಕೂರು ಜಿಲ್ಲೆಯ ಮಾಯಸಂದ್ರದಲ್ಲಿ ಜನಿಸಿದ್ದು, ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.