ಇಂದು ಖ್ಯಾತ ಗಾಯಕ ದಿವಂಗತ ಕಿಶೋರ್ ಕುಮಾರ್ ಅವರ ಜನ್ಮದಿನ. 1929ರ ಆಗಸ್ಟ್ 4ರಂದು ಜನಿಸಿದ ಇವರು ಅದ್ಭುತ ಗಾಯಕ ಮಾತ್ರವಲ್ಲ, ನಟ ಕೂಡ ಹೌದು. ಮೆಲೋಡಿಯಸ್ ಹಾಡುಗಳನ್ನೇ ಹಾಡಿರುವ ಕಿಶೋರ್ ಕುಮಾರ್, ತಮ್ಮ ವೃತ್ತಿ ಜೀವನದುದ್ದಕ್ಕೂ ಹಿಟ್ ಗೀತೆಗಳನ್ನೇ ನೀಡುವ ಮುಖಾಂತರ ಇಂದಿಗೂ ಜನಮಾನಸದಲ್ಲಿ ಬೆರೆತಿದ್ದಾರೆ.
ಅಭಾಸ್ ಕುಮಾರ್ ಗಂಗೂಲಿಯಾಗಿ ಜನಿಸಿದ ಇವರು, ಜನಪ್ರಿಯ ನಟ ಅಶೋಕ್ ಕುಮಾರ್ ಅವರ ಕಿರಿಯ ಸಹೋದರ. ಕಿಶೋರ್ ಕುಮಾರ್ ಅವರ ಹಾಡುಗಳಲ್ಲಿ ಸಾಮಾನ್ಯವಾಗಿ ಖ್ಯಾತ ನಟ ರಾಜೇಶ್ ಖನ್ನಾ ಕಾಣಿಸಿಕೊಳ್ಳುತ್ತಿದ್ದರು. ತಮ್ಮ 58ನೇ ವಯಸ್ಸಿನಲ್ಲಿ ನಿಧನ ಹೊಂದಿದ ಕಿಶೋರ್ ಕುಮಾರ್ ಅವರಿಗೆ ಇಂದಿಗೂ ಅಪಾರ ಅಭಿಮಾನಿ ಬಳಗವಿದೆ. ಇಂದು ಅವರ 92ನೇ ಜನ್ಮದಿನ, ಗಾಯಕನ ಕೆಲವೊಂದು ಸ್ಮರಣೀಯ ಹಾಡುಗಳ ಬಗ್ಗೆ ತಿಳಿಯೋಣ:
ಮಗನ ಸ್ನೇಹಿತನನ್ನೇ ಮದುವೆಯಾದ 7 ಮಕ್ಕಳ ತಾಯಿ..!
ಏಕ್ ಲಡ್ಕಿ ಭೀಗಿ ಭೀಗಿ ಸೀ :
1958ರಲ್ಲಿ ತೆರೆಕಂಡ ‘ಚಲ್ತಿ ಕಾ ನಾಮ್ ಗಾಡಿ’ ಚಿತ್ರದ ಪ್ರಸಿದ್ಧ ಹಾಡಿದು. ಈ ಹಾಡನ್ನು ಎಸ್ ಡಿ ಬರ್ಮನ್ ಅವರು ರಚಿಸಿದ್ದು, ಮಜ್ರೂಹ್ ಸುಲ್ತಾನ್ ಪುರ್ ಸಾಹಿತ್ಯ ಬರೆದಿದ್ದಾರೆ.
ಓ ಮೇರೆ ದಿಲ್ ಕೆ ಚೈನ್:
1972ರಲ್ಲಿ ತೆರೆ ಕಂಡ ‘ಮೇರೆ ಜೀವನ್ ಸಾಥಿ’ಗಾಗಿ ಕಿಶೋರ್ ಕುಮಾರ್ ಈ ಹಾಡು ಹಾಡಿದ್ದಾರೆ. ಚಿತ್ರದಲ್ಲಿ ರಾಜೇಶ್ ಖನ್ನಾ ಜೊತೆ ತನುಜಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು.
ಈ ಹಾಡನ್ನು ಎಸ್ ಡಿ ಬರ್ಮನ್ ಅವರ ಪುತ್ರ ಆರ್ ಡಿ ಬರ್ಮನ್ ರಚಿಸಿದ್ದಾರೆ ಮತ್ತು ಮಜ್ರೂಹ್ ಸುಲ್ತಾನಪುರಿ ಸಾಹಿತ್ಯವಿದೆ. ಕಿಶೋರ್ ಕುಮಾರ್ ಜೊತೆ ಲತಾ ಮಂಗೇಶ್ಕರ್ ಈ ಹಾಡನ್ನು ಹಾಡಿದ್ದಾರೆ.
ಹಮೇ ತುಮ್ಸೆ ಪ್ಯಾರ್ ಕಿತ್ನಾ:
1981ರಲ್ಲಿ ತೆರೆಕಂಡ ಕುದ್ರತ್ ಚಿತ್ರದ ಈ ಹಾಡಿಗೆ ಕುಮಾರ್ ತಮ್ಮ ಸುಮಧುರ ಧ್ವನಿಯನ್ನು ನೀಡಿದ್ದಾರೆ. ರಾಜ್ ಕುಮಾರ್, ರಾಜೇಶ್ ಖನ್ನಾ ಮತ್ತು ಹೇಮಾ ಮಾಲಿನಿ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಚೇತನ್ ಆನಂದ್ ನಿರ್ದೇಶಿಸಿದ್ದಾರೆ. ಈ ಹಾಡಿಗೆ ಸಂಗೀತವನ್ನು ಆರ್ಡಿ ಬರ್ಮನ್ ಸಂಯೋಜಿಸಿದ್ದಾರೆ ಮತ್ತು ಮಜ್ರೂಹ್ ಸುಲ್ತಾನಪುರಿ ಸಾಹಿತ್ಯ ರಚಿಸಿದ್ದಾರೆ.
ಮೇರೆ ಸಪ್ನೋ ಕಿ ರಾಣಿ:
1969ರಲ್ಲಿ ಬಿಡುಗಡೆಯಾದ ಆರಾಧನಾ ಚಿತ್ರದ ಹಾಡು ಇಂದಿಗೂ ಜನಪ್ರಿಯತೆಯನ್ನು ಪಡೆದಿದೆ. ಸೂಪರ್ ಸ್ಟಾರ್ ರಾಜೇಶ್ ಖನ್ನಾ ಹಾಗೂ ಶರ್ಮಿಳಾ ಟ್ಯಾಗೋರ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆನಂದ್ ಬಕ್ಷಿ ಸಾಹಿತ್ಯವಿರುವ ಈ ಹಾಡಿಗೆ ಎಸ್ ಡಿ ಬರ್ಮನ್ ಅವರು ಸಂಗೀತ ಸಂಯೋಜಿಸಿದ್ದಾರೆ.
ದೇಖಾ ಏಕ್ ಖ್ವಾಬ್:
1981ರ ಸಿಲ್ಸಿಲಾ ಚಿತ್ರಕ್ಕಾಗಿ ಕಿಶೋರ್ ಕುಮಾರ್ ಹಾಗೂ ಲತಾ ಮಂಗೇಶ್ಕರ್ ಅವರು ಈ ಹಾಡು ಹಾಡಿದ್ದಾರೆ. ಸಂಗೀತ ನಿರ್ದೇಶಕರಾದ ಶಿವ ಮತ್ತು ಹರಿ ರೊಮ್ಯಾಂಟಿಕ್ ಟ್ರ್ಯಾಕ್ ಸಂಯೋಜಿಸಿದ್ದಾರೆ. ಯಶ್ ಚೋಪ್ರಾ ನಿರ್ದೇಶನವಿರುವ ಈ ಚಿತ್ರಕ್ಕೆ ಜಾವೇದ್ ಅಖ್ತರ್ ಸಾಹಿತ್ಯ ರಚಿಸಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ರೇಖಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.
https://www.youtube.com/watch?v=T25GiGCspFg
https://www.youtube.com/watch?v=-Q8mrKJ1Jps