ಈಗ ಇಂಗ್ಲೀಷ್ ಅನಿವಾರ್ಯ ಎನ್ನುವಂತಾಗಿದೆ. ಸರಿಯಾಗಿ ಇಂಗ್ಲೀಷ್ ಮಾತನಾಡಲು ಬರದವರು ಕಾನ್ಫಿಡೆನ್ಸ್ ಕಳೆದುಕೊಳ್ಳುತ್ತಾರೆ. ಸರಿಯಾಗಿ ಇಂಗ್ಲೀಷ್ ಮಾತನಾಡುವ ವ್ಯಕ್ತಿ ಮುಂದಿದ್ರೆ, ಅಲ್ಪಸ್ವಲ್ಪ ಬರುವ ಇಂಗ್ಲೀಷ್ ಕೂಡ ಮರೆತು ಹೋಗುವುದುಂಟು. ಇದಕ್ಕೆ ಕಾರಣ ಮೊದಲೇ ಹೇಳಿದಂತೆ ಕಾನ್ಫಿಡೆನ್ಸ್. ಸಾಮಾನ್ಯ ಜನರಿಗೆ ಮಾತ್ರವಲ್ಲ ಅನೇಕ ಸೆಲೆಬ್ರಿಟಿಗಳಿಗೆ ಕೂಡ ಸರಿಯಾಗಿ ಮಾತನಾಡಲು ಬರುವುದಿಲ್ಲ.
ಕ್ರಿಕೆಟ್ ಟೂರ್ನಮೆಂಟ್ ಗಳಲ್ಲಿ ನಾವು ಅನೇಕ ಆಟಗಾರರು ಇಂಗ್ಲೀಷ್ ಮಾತನಾಡುವಾಗ ತೊದಲುವುದನ್ನು ನೋಡಿದ್ದೇವೆ. ಇನ್ನು ಬಾಲಿವುಡ್ ನ ಅನೇಕ ಪ್ರಸಿದ್ಧ ಕಲಾವಿದರಿಗೆ ಇಂಗ್ಲೀಷ್ ಬರುವುದಿಲ್ಲ.
ಸದ್ಯ ವಿವಾದಗಳಿಂದ ಚರ್ಚೆಯಲ್ಲಿರುವ ಕಂಗನಾ ಕೂಡ ಇದ್ರಲ್ಲಿ ಒಬ್ಬರು. ಬಾಲಿವುಡ್ ನಲ್ಲಿ ಕ್ವೀನ್ ಆಗಿರುವ ಕಂಗನಾ ಇಂಗ್ಲೀಷ್ ವಿಷ್ಯದಲ್ಲಿ ಸ್ವಲ್ಪ ವೀಕ್. ಈಗ ಸರಿಯಾಗಿ ಮಾತನಾಡುವುದನ್ನು ಕಲಿತಿದ್ದಾರೆ. ಆರಂಭದಲ್ಲಿ ಕಂಗನಾಗೆ ಸ್ವಲ್ಪವೂ ಇಂಗ್ಲೀಷ್ ಬರ್ತಿರಲಿಲ್ಲ.
ನವಾಜುದ್ಧೀನ್ ಸಿದ್ಧಿಕಿ ಬಾಲಿವುಡ್ ನ ಸೂಪರ್ ಸ್ಟಾರ್. ಬಡತನದಿಂದ ಮೇಲೆ ಬಂದ ಸಿದ್ಧಿಕಿ ಹೆಚ್ಚು ಓದಲಿಲ್ಲ. ಹಾಗಾಗಿ ಅವ್ರ ಇಂಗ್ಲೀಷ್ ಕೂಡ ಅಷ್ಟು ಚೆನ್ನಾಗಿಲ್ಲ.
ಕಾಮಿಡಿಯನ್ ಕಪಿಲ್ ಶರ್ಮಾ ಇಂಗ್ಲೀಷ್ ಕೂಡ ವೀಕ್ ಇದೆ. ಇದನ್ನು ತಮ್ಮ ಶೋದಲ್ಲಿಯೇ ಅನೇಕ ಬಾರಿ ಕಪಿಲ್ ಶರ್ಮಾ ಹೇಳಿದ್ದಾರೆ.
ಕಾಮಿಡಿ ಕಿಂಗ್ ಗೋವಿಂದ ಈಗ್ಲೂ ಬಾಲಿವುಡ್ ನಲ್ಲಿ ಹೆಸರುಳಿಸಿಕೊಂಡಿದ್ದಾರೆ. 12 ಫಿಲ್ಮಂ ಫೇರ್ ಅವಾರ್ಡ್ ಪಡೆದಿರುವ ಗೋವಿಂದ ಈಗ್ಲೂ ಹಿಂದಿಯಲ್ಲಿ ಮಾತನಾಡುವುದನ್ನು ಹೆಚ್ಚು ಇಷ್ಟಪಡ್ತಾರೆ.
ಎಲ್ಲರ ಫೆವರೇಟ್ ನಟ ಅಕ್ಷಯ್ ಕುಮಾರ್. ವರ್ಷದಲ್ಲಿ ನಾಲ್ಕೈದು ಚಿತ್ರಗಳನ್ನು ಮಾಡುವ ಅಕ್ಷಯ್, ಗಳಿಕೆಯಲ್ಲೂ ಮುಂದಿದ್ದಾರೆ. ಆದ್ರೆ ಅಕ್ಷಯ್ ಕುಮಾರ್ ಗೆ ಕೂಡ ಇಂಗ್ಲೀಷ್ ಅಂದ್ರೆ ಭಯವಿದೆ.
ಇಷ್ಟೇ ಅಲ್ಲ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಇಂಗ್ಲೀಷ್ ಕೂಡ ಹೇಳುವಷ್ಟು ಚೆನ್ನಾಗಿಲ್ಲ. ಆರಂಭದಲ್ಲಿ ಇಬ್ಬರೂ ಇಂಗ್ಲೀಷ್ ನಲ್ಲಿ ಮಾತನಾಡಲು ಕಷ್ಟಪಡ್ತಿದ್ದರು. ಈಗ ಒಂದು ಹಂತಕ್ಕೆ ಮಾತನಾಡಲು ಕಲಿತಿದ್ದಾರೆ.