ಅದಿತಿ ಪ್ರಭುದೇವ ಅಭಿನಯದ ‘ಆನ’ ಚಿತ್ರದ ಮೋಷನ್ ಪೋಸ್ಟರ್ ಅನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ. ಈ ಸಿನಿಮಾವನ್ನು ಮನೋಜ್ ಪಿ ನಡುಲಮನೆ ನಿರ್ದೇಶನ ಮಾಡಿದ್ದು ಅದಿತಿ ಪ್ರಭುದೇವ ಈ ಚಿತ್ರದಲ್ಲಿ ಫಿಮೇಲ್ ಸೂಪರ್ ಹೀರೋ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಆದಿತ್ಯ ನಟನೆಯ ‘ಮುಂದುವರೆದ ಅಧ್ಯಾಯ’ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆ
ಪೂಜಾ ವಸಂತ ಕುಮಾರ್ ಯುಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದು ಈ ಚಿತ್ರದಲ್ಲಿ ಅದಿತಿ ಪ್ರಭುದೇವ ಸೇರಿದಂತೆ ಚೇತನ್ ಗಂಧರ್ವ, ವರುಣ್ ಅಮರಾವತಿ, ಕಾರ್ತಿಕ್ ನಾಗರಾಜನ್, ಸುನಿಲ್ ಕುಮಾರ್ ಡಿ.ಕೆ., ಸಮರ್ಥ್ ನರಸಿಂಹರಾಜು, ಮುಂತಾದ ತಾರಾಬಳಗವಿದೆ. ಈ ಸಿನಿಮಾ ಹೊರತು ಪಡಿಸಿ ಅದಿತಿ ಪ್ರಭುದೇವ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.